

ಶಿರಸಿ: ಹುಲ್ಲು ಸಾಗಿಸುತ್ತಿದ್ದ ಲಾರಿ ವಿದ್ಯುತ್ ಲೈನ್ಗೆ ತಾಗಿ ಬೆಂಕಿ ತಗುಲಿ ಹುಲ್ಲು ಸುಟ್ಟು ಕರಕಲಾದ ಘಟನೆ ನಗರದ ಝುೂ ಸರ್ಕಲ್ ಬಳಿ ಶನಿವಾರ ನಡೆದಿದೆ.
ಹುಬ್ಬಳ್ಳಿ ರಸ್ತೆ ಮೂಲಕ ಝುೂ ಸರ್ಕಲ್ ಮಾರ್ಗವಾಗಿ ಹುಲೇಕಲ್ ರಸ್ತೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಕ್ಷಣ ಗಮನಿಸಿದ ಸ್ಥಳದಲ್ಲಿದ್ದವರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಹಾಗೂ ನಗರ ಠಾಣೆ ಪೊಲೀಸರ ಸಹಕಾರದಲ್ಲಿ ಸತತ 4 ಗಂಟೆ ಕಾರ್ಯಾಚರಣೆ ನಡೆಸಿ, ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.