

ಬೆಂಗಳೂರು: ಇಲ್ಲೊಬ್ಬ ಬೈಕ್ ಸವಾರ ಒಂದಲ್ಲ ಎರಡಲ್ಲ, ಬರೋಬ್ಬರಿ 46 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ. ಒಂದೇ ಬೈಕ್ ಮೇಲೆ 46 ಕೇಸ್ ದಾಖಲಾಗಿದ್ದರೂ ಒಂದಕ್ಕೂ ದಂಡ ಪಾವತಿಸಿರರಿಲ್ಲ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪಿಎಸ್ಐ ಶಿವಣ್ಣ ಅವರು ಎಲ್ಲ ಬಾಕಿಯನ್ನೂ ಗುರುವಾರ ಒಂದೇ ದಿನ ವಸೂಲಿ ಮಾಡಿದ್ದಾರೆ.
ಒಂದೇ ಬೈಕ್ನ ಮೇಲಿದ್ದ ಬಾಕಿ 46 ಕೇಸುಗಳ ಸಂಬಂಧ ಒಟ್ಟು 24,500 ರೂಪಾಯಿ ದಂಡ ಪಾವತಿಸಬೇಕಿತ್ತು. ಗುರುವಾರ ಕಾಮಾಕ್ಷಿಪಾಳ್ಯದಲ್ಲಿ ಬೈಕ್ ಸವಾರನನ್ನು ಅಡ್ಡಗಟ್ಟಿದ ಪಿಎಸ್ಐ, ಒಂದೇ ದಿನ ಎಲ್ಲ ಬಾಕಿಯನ್ನೂ ಸಂಗ್ರಹಿಸಿ ಸಂಚಾರ ನಿಯಮ ಪಾಲಿಸುವಂತೆ ತಿಳಿಹೇಳಿದ್ದಾರೆ.