

ಹುಬ್ಬಳ್ಳಿ: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಹಿನ್ನೆಲೆ ಕಲಘಟಗಿ ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ತಿರಂಗಾ ಮಹಾ ರ‍್ಯಾಲಿಗೆ ಅದ್ದೂರಿ ಚಾಲನೆ ನೀಡಲಾಯಿತು.
9 ಕಿ.ಮೀ. ಉದ್ದ, 9 ಅಡಿ ಅಗಲದ ರಾಷ್ಟ್ರಧ್ವಜವನ್ನ ಹಿಡಿದು ಸಾವಿರಾರು ಮಂದಿ ಹಜ್ಜೆ ಹಾಕಿದರೆ, 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾರತ ಮಾತೆಗೆ ಪೂರ್ಣ ಕುಂಭ ಗೌರವ ಸಲ್ಲಿಸಿದರು. ರ‍್ಯಾಲಿಯುದ್ದಕ್ಕೂ ವಿವಿಧ 300ಕ್ಕೂ ಹೆಚ್ಚು ಕಲಾವಿದರು ಸಾಥ್ ನೀಡಿದರು. 6 ಬೃಹತ್ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ದಾಸ್ತಿಕೊಪ್ಪ ಬ್ರಿಡ್ಜ್ ಬಳಿ ತಿರಂಗಾ ರ‍್ಯಾಲಿಗೆ ಮಾಜಿ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದರು. ಗಳಗಿನಗಟ್ಟಿ ಕ್ರಾಸ್ವರೆಗೆ ರ‍್ಯಾಲಿ ಸಾಗಿತು. ಆ ಮೂಲಕ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಹಿನ್ನೆಲೆ ವಿಶ್ವದಾಖಲೆಗೆ ಕಲಘಟಗಿ ಮುನ್ನುಡಿ ಬರೆಯಿತು.(ದಿಗ್ವಿಜಯ ನ್ಯೂಸ್)