More

    ಚಾಮರಾಜಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ: ನಿರೀಕ್ಷೆಗೂ ಮೀರಿ ಸಾವಿರಾರು ಜನ ಭಾಗಿ

    ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಸೋಮವಾರ ಪೊಲೀಸ್​ ಬಂದೋಬಸ್ತ್​ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ನೆರವೇರಿತು. ನಿರೀಕ್ಷೆಗೂ ಮೀರಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಎಲ್ಲರಿಗೂ ಸಿಹಿ ವಿತರಿಸಲಾಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿ ಗೀತೆ ಗಾಯನ, ನೃತ್ಯ ಕಾರ್ಯಕ್ರಮಗಳು ಮನಸೆಳೆದವು.

    ಬೆಳಗ್ಗೆ 8 ಗಂಟೆಗೆ ಕಂದಾಯ ಇಲಾಖೆ ಎಸಿ ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕ ಜಮೀರ್​ ಅಹ್ಮದ್​ ಖಾನ್​ ಮತ್ತು ಪೊಲೀಸ್​ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಾರ್ವಜನಿಕರು, ಮಕ್ಕಳು ಸೇರಿದಂತೆ ಎಲ್ಲರಿಗೂ ಲಾಡು, ಬಿಸ್ಕತ್​, ಹೋಳಿಗೆಯನ್ನು ವಿತರಿಸಿ ಶುಭಕೋರುತ್ತಿದ್ದ ದೃಶ್ಯ ಕಂಡುಬಂತು. ಮತ್ತೊಂದೆಡೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಅದೇ ವೇಳೆ ಚಾಮರಾಜಪೇಟೆ ಆಟದ ಮೈದಾನದ ರಸ್ತೆಯಲ್ಲಿ ಬೃಹತ್​ ತಿರಂಗ ಹಿಡಿದು ನೂರಾರು ಮಂದಿ ಸಾಗಿದರು.\

    ಚಾಮರಾಜಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿದ ಸ್ವಾತಂತ್ರ್ಯದ ಅಮೃತ ಮಹೋತ್ಸವ: ನಿರೀಕ್ಷೆಗೂ ಮೀರಿ ಸಾವಿರಾರು ಜನ ಭಾಗಿ

    ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಚಾಮರಾಜಪೇಟೆ ಆಟದ ಮೈದಾನ ಮತ್ತು ಸುತ್ತಮುತ್ತ ಖಾಕಿ ಸರ್ಪಗಾವಲಿತ್ತು. ಓರ್ವ ಹೆಚ್ಚುವರಿ ಪೊಲೀಸ್​ ಆಯುಕ್ತರು ಮತ್ತು ಮೂವರು ಡಿಸಿಪಿಗಳು, 6 ಎಸಿಪಿಗಳು, 15 ಇನ್​ಸ್ಪೆಕ್ಟರ್​ಗಳು, 45 ಸಬ್​ಇನ್​ಸ್ಪೆಕ್ಟರ್​ಗಳು, ಐವರು ಮಹಿಳಾ ಪಿಎಸ್​ಐಗಳು, 30 ಎಎಸ್​ಐ, 300 ಕಾನ್​ಸ್ಟೆಬಲ್​, ಹೆಡ್​ ಕಾನ್​ಸ್ಟೆಬಲ್​ ಹಾಗೂ 20 ಹೊಯ್ಸಳ, 5 ಕೆಎಸ್​ಆರ್​ಪಿ ತುಕಡಿ, 2 ಸಿಎಆರ್​ ತುಕಡಿ, 1 ಆರ್​ಎಫ್​​ಎ ಕಂಪನಿ ನಿಯೋಜನೆಯಾಗಿತ್ತು. ಸಿಸಿ ಕ್ಯಾಮರಾ ಅಳವಡಿಸಿದ್ದು, ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲಾಯಿತು.

    ಸ್ವಾತಂತ್ರ್ಯದ ಅಮೃತ ಮಹೋತ್ಸವ: ಪಂಚಪ್ರಾಣ ಸಂಕಲ್ಪಕ್ಕೆ ಕರೆ, ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ…

    ಸಾಧನೆಯ ಅಮೃತ ಹಾದಿ: 75 ವರ್ಷಗಳ ಪ್ರಗತಿ ಸಾಕಷ್ಟು, ಸಾಧಿಸಬೇಕಾಗಿದೆ ಇನ್ನಷ್ಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts