ಟಿಕ್‌ಟಾಕ್ ಸ್ಟಾರ್ ಕಮಲಜ್ಜಿ ನಿಧನ: ಇಳಿವಯಸ್ಸಲ್ಲೂ ಸಹಸ್ರಾರು ಜನರನ್ನು ನಗಿಸುತ್ತಿದ್ದ ಅಜ್ಜಿ

kamalajji
Published on

ವಿಟ್ಲ: ಟಿಕ್‌ಟಾಕ್ ಹಾಸ್ಯ ವಿಡಿಯೋಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅನಂತಾಡಿ ಗ್ರಾಮದ ಮಾಮೇಶ್ವರ ಸಂಕೇಶ ನಿವಾಸಿ ಕಮಲಜ್ಜಿ ಯಾನೆ ಕಮಲಾ(85) ನಿಧನರಾದರು.

ಕಮಲಜ್ಜಿಗೆ ಕಳೆದ ವಾರ ಅನಾರೋಗ್ಯ ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಕೊನೆಯುಸಿರೆಳೇದರು. ಕಮಲಜ್ಜಿಗೆ ಆರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

ಟಿಕ್‌ಟಾಕ್ ಸ್ಟಾರ್ ಧನರಾಜ್ ಆಚಾರ್ ಜತೆ ಕಮಲಜ್ಜಿ 50ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು. ಇವರ ಕುಟುಂಬವೇ ಟಿಕ್‌ಟಾಕ್ ಫ್ಯಾಮಿಲಿ ಎಂದು ಹೆಸರು ಪಡೆದಿತ್ತು. ಇಳಿವಯಸ್ಸಿನಲ್ಲೂ ಹಾಸ್ಯ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ, ಮನೆ ಮಂದಿಯೊಂದಿಗೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದ ತಮ್ಮದೇ ಆದ ಅಭಿಮಾನಿ ವರ್ಗ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net