ಕೋಲಾರದಲ್ಲಿ ಯುವತಿಯರ ಜತೆ ಗ್ರಾಪಂ ಅಧ್ಯಕ್ಷನ ನಂಗಾನಾಚ್‌ ಡಾನ್ಸ್! ವಿಡಿಯೋ ವೈರಲ್​

dance
Published on

ಕೋಲಾರ: ದೇಗುಲದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯ ಇಬ್ಬರೂ ನಂಗಾನಾಚ್‌ ಡಾನ್ಸ್ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ.

ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾಮದಲ್ಲಿ ಒಂದು ವಾರದಿಂದ ವೇಲುಪಲ್ಲಿ ಗಂಗಮಾಂಭ ಜಾತ್ರೆ ನಡೆಯುತ್ತಿದ್ದು, ಈ ಹಿನ್ನೆಲೆ ಫೆ.8ರಂದು ಆಂಧ್ರ ಮೂಲದ ನಂಗನಾಚ್ ಡಾನ್ಸ್ ಟ್ರೂಪ್ ಕರೆಸಲಾಗಿತ್ತು. ಅರೆಬರೆ ಬಟ್ಟೆ ತೊಟ್ಟು ಯುವತಿಯರು ವೇದಿಕೆಯಲ್ಲಿ ಡಾನ್ಸ್​ ಮಾಡುತ್ತಿದ್ದರು. ಧಾರ್ಮಿಕ ಕಾರ್ಯಕ್ರಮ ನಡೆಯಬೇಕಿದ್ದ ಜಾಗದಲ್ಲಿ ನಂಗನಾಚ್​ ನೃತ್ಯ ನಡೆದಿದೆ.

ಈ ವೇಳೆ ಆ ಯುವತಿಯರ ಜತೆ ಗ್ರಾಪಂ ಅಧ್ಯಕ್ಷ ರಘು ಮತ್ತು ಸದಸ್ಯ ರಾಜಣ್ಣ ಕೂಡ ಹೆಜ್ಜೆ ಹಾಕಿದ್ದಾರೆ. ಯುವತಿರ ಜತೆ ಕುಣಿದು ಕುಪ್ಪಳಿಸಿದ್ದಾರೆ. ಈ ದೃಶ್ಯ ವೈರಲ್​ ಆಗಿದ್ದು, ಜನಪ್ರತಿನಿಧಿಗಳಿಗೆ ಇದೆಲ್ಲಾ ಬೇಕಿತ್ತಾ? ದೇವರ ಕಾರ್ಯಕ್ರಮದಲ್ಲಿ ಇಂತಹ ಡಾನ್ಸ್​ನ ಅಗತ್ಯವಿತ್ತೇ? ಇಂತಹವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net