ಹುಬ್ಬಳ್ಳಿಯಲ್ಲಿ ಟೈಕಾನ್​ ಸಮಾವೇಶ: ಯುವ ಉದ್ಯಮಿಗಳ ಸಮಾಗಮ

ticon
Published on

ಹುಬ್ಬಳ್ಳಿ: ಉದ್ಯಮಶೀಲತೆ ಉತ್ತೇಜನಾ ಕಾರ್ಯದಲ್ಲಿ ಸಕ್ರಿಯವಾಗಿರುವ ಟೈ ಸಂಸ್ಥೆಯು ಹುಬ್ಬಳ್ಳಿಯಲ್ಲಿ 'ಮಹಿಳಾ ಸಮ್ಮೇಳನ ಹಾಗೂ ಟೈಕಾನ್-2022' ಸಮಾವೇಶ ಆಯೋಜಿಸಿದ್ದು, ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.

ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿ ವಾಹಿನಿ ಮಾಧ್ಯಮ ಸಹಯೋಗದಲ್ಲಿ ಹುಬ್ಬಳ್ಳಿಯ ನವೀನ ಹೋಟೆಲ್​ನಲ್ಲಿ ಟೈಕಾನ್​ ಸಮಾವೇಶ ನಡೆಯುತ್ತಿದೆ. ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಟೈ ಹುಬ್ಬಳ್ಳಿ ಅಧ್ಯಕ್ಷ ವಿಜೇಶ ಸೈಗಲ್ ಸ್ವಾಗತಿಸಿದರು. ಸ್ವರ್ಣ ಗ್ರೂಪ್ ಆಫ್ ಕಂಪನೀಸ್​ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ಟೈ ಗ್ಲೋಬಲ್ ಬೋರ್ಡ್ ಟ್ರಸ್ಟ್ ಅಧ್ಯಕ್ಷ ಬಿ.ಜೆ.‌ಅರುಣ್, ಟೈಕಾನ್ ಸಂಚಾಲಕ ತರುಣ ಮಹಾಜನ ಪಾಲ್ಗೊಂಡಿದ್ದರು.

ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಹೂವು ಕಂಪನಿ ಸಿಇಒ ಯಶೋದಾ ಹಾಗೂ ಸಿಟಿಒ ರಿಯಾ ಕರುತುರಿ, ಪೂಜೆಗಾಗಿ ಮನೆ ಬಾಗಿಲಿಗೆ ಹೂವುಗಳನ್ನು ತಲುಪಿಸುವ ಉದ್ಯಮ‌ ಸ್ಥಾಪನೆ‌ ಮಾಡಿದಾಗ ಸಾಕಷ್ಟು ಸವಾಲುಗಳಿದ್ದವು. ಶೇ.40 ಉತ್ಪನ್ನಗಳು ಹಾಳುಗುತ್ತಿದ್ದವು. ಇಂದು ನಾವು ಉದ್ಯಮ‌ ಕ್ಷೇತ್ರದಲ್ಲಿ ಹೊಸ ಮಾದರಿಯನ್ನೇ ಸೃಷ್ಟಿಸಿದ್ದೇವೆ. ನಿತ್ಯ 1.5 ಲಕ್ಷ ಆರ್ಡರ್ ಪಡೆಯುತ್ತಿದ್ದೇವೆ. ನಮ್ಮಲ್ಲಿ ಶೇ.90 ಮಹಿಳೆಯರೇ ಕೆಲಸ‌ ಮಾಡುತ್ತಿದ್ದಾರೆ ಎಂದರು.

ಸಂಜೆ ನಡೆಯುವ ಸಮಾರೋಪ ಸಮಾರಂಭಕ್ಕೆ ಕ್ರಿಕೆಟ್​ ದಂತಕಥೆ ಕಪಿಲ್​ದೇವ್​ ಆಗಮಿಸಲಿದ್ದಾರೆ. ಯುವ ಉದ್ಯಮಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಟೈಕಾನ್​ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ನೂರಾರು ಯುವ ಉದ್ಯಮಿಗಳು ಹಾಗೂ ಹಲವು ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net