ರಾಮನಗರಕ್ಕೆ ಸಾವಿರ ಕೋಟಿ ಅನುದಾನ!

ಹಾರೋಹಲ್ಲಿ
Published on

ಹಾರೋಹಳ್ಳಿ: ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು ಒಂದು ಸಾವಿರ ಕೋಟಿ ರೂ. ಅನುದಾನ ಬಂದಿದ್ದು, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ರಾಮನಗರದ ಅರ್ಕಾವತಿ ನದಿ ದಡದಲ್ಲಿ ಸುಮಾರು 157 ಕೋಟಿ ರೂ. ವೆಚ್ಚದಲ್ಲಿ ಮೂರುವರೆ ಕಿ.ಮೀ ವಾಕಿಂಗ್​ ಪಾತ್​ ನಿರ್ಮಾಣ ಮಾಡಲಾಗುತ್ತಿದ್ದು, ವಿಶ್ವ ದರ್ಜೆಯ ಸೌಕರ್ಯ ಇದರಲ್ಲಿರಲಿವೆ. ನಮ್ಮ ಇಲಾಖೆಯಿಂದಲೇ 300 ಕೋಟಿ ರೂ. ಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್​ ಹೇಳಿದರು.

ತಾಲೂಕಿನ ಮರಳವಾಡಿ ಹೋಬಳಿಯ ಗಾಂಧಿ ಫಾಮ್​ರ್ನಲ್ಲಿ ಆರ್​ಇಎಸ್​ ಸಂಸ್ಥೆಯ ಕೃಷಿ ಮಹಾವಿದ್ಯಾಲಯದ ಕಟ್ಟಡ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಕನಕಪುರ, ಕೋಡಿಹಳ್ಳಿ, ಸಾತನೂರು, ದೊಡ್ಡ ಹಾಲಳ್ಳಿ ಸೇರಿ ಎಲ್ಲ ಕಡೆ ರಸ್ತೆ ವಿಸ್ತರಣೆ ಮಾಡಲಾಗಿದ್ದು, ಹಾಗೆಯೇ ಹಾರೋಹಳ್ಳಿಯಲ್ಲಿಯೂ ರಸ್ತೆಯ ವಿಸ್ತರಣೆ ಶ್ರೀದಲ್ಲಿಯೇ ಮಾಡಲಾಗುವುದು. ಹಾರೋಹಳ್ಳಿ ಮರಳವಾಡಿ ರಸ್ತೆ ವಿಸ್ತರಣೆ ಮಾಡಲಾಗುತ್ತದೆ. ಇದರಿಂದ ನಿಮ್ಮ ಭೂಮಿಯ ಬೆಲೆ ಹೆಚ್ಚಾಗುತ್ತದೆ. ಅಭಿವೃದ್ಧಿ ಕೆಲಸಗಳು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬೆಂಗಳೂರು ದಣ ಜಿಲ್ಲೆ ಎಂದು ಹೆಸರು ಬದಲಾವಣೆಯಿಂದ ಏನೆಲ್ಲ ಬದಲಾವಣೆಯಾಗುತ್ತಿದೆ ಎಂಬುದು ಜನರಿಗೆ ಅರ್ಥವಾಗುತ್ತಿದೆ. ಕೆಲವರು ಇದನ್ನು ಟೀಕೆ ಮಾಡುತ್ತಿದ್ದು, ಅವರಿಗೆ ಉತ್ತರ ನೀಡಲು ಹೋಗುವುದಿಲ್ಲ. ನಾವು ನಮಗೆ ಇರುವ ಹೆಸರನ್ನು ಉಳಿಸಿಕೊಂಡಿದ್ದೇವೆ. ಯಾರ ಹೆಸರನ್ನು ಕಿತ್ತುಕೊಂಡಿಲ್ಲ ಎಂದರು.

ನಾವು ಮೊದಲು ಬೆಂಗಳೂರಿನಲ್ಲಿದ್ದು, ಹೆಸರು ಉಳಿಸಿಕೊಳ್ಳಲು ಮತ್ತೆ ಬೆಂಗಳೂರು ದಣ ಮಾಡಲಾಗಿದೆ. ರಾಮನಗರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಾವು ಯಾರ ಹೆಸರನ್ನೂ ಕಿತ್ತುಕೊಂಡಿಲ್ಲ. ನಮ್ಮ ಹೆಸರನ್ನು ಉಳಿಸಿಕೊಂಡಿದ್ದೇವೆ. ಬೆಂಗಳೂರು ಜಿಲ್ಲೆಯವರು ಎಂದರೆ ಇಡೀ ವಿಶ್ವಕ್ಕೆ ಚಿರಪರಿಚಿತ. ಅಭಿವೃದ್ಧಿ ಶರವೇಗದಲ್ಲಿ ಸಾಗುತ್ತದೆ. ಸಾಕಷ್ಟು ಟೀಕೆಗಳು ಬಂದಿವೆ. ಆದರೆ, ಅದಕ್ಕೆಲ್ಲ ಉತ್ತರ ನೀಡುವ ಸಮಯ ಇದಲ್ಲ ಎಂದರು.

ಕಾಯಕಯೋಗಿ ಶಿಣ ತ ಕರಿಯಪ್ಪನವರ ಹೆಸರನ್ನು ಉಳಿಸಬೇಕು. ಕೃಷಿ ಮಹಾವಿದ್ಯಾಲಯವನ್ನು ಒಂದೇ ಸಲ ಪ್ರಾರಂಭ ಮಾಡಿ ಸುಮಾರು 500 ಜನರಿಗೆ ಆಗುವಷ್ಟು ಹಾಸ್ಟೆಲ್​ ಅನ್ನು ಇಲ್ಲಿಯೇ ನಿರ್ಮಾಣ ಮಾಡಬೇಕು. ಅದಕ್ಕೆ ಬೇಕಾದ ಹಣಕಾಸಿನ ಸಾಲ ಸೌಲಭ್ಯ ನಾನೆ ಕೊಡಿಸುತ್ತೇನೆ. ಜತೆಗೆ ಕಟ್ಟಡಗಳು ಹೇಗಿರಬೇಕು ಎಂದು ಆರ್ಕಿಟೆಕ್ಟ್​ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಉತ್ತಮ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಿದೆ ಎಂದರು.

ಆರ್​ಎಸ್​ ಸಂಸ್ಥೆಯ ಅಧ್ಯ ಎಚ್​.ಕೆ. ಶ್ರೀಕಂಠು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು 1933ರಲ್ಲಿ ಎಸ್​. ಕರಿಯಪ್ಪನವರು ಶಾಲೆ ತೆರೆದು ಉನ್ನತ ಶಿಣದ ಕನಸು ಕಂಡಿದ್ದವರು. ಕೃಷಿ ಕಾಲೇಜು ನಿರ್ಮಾಣ ಆಗುತ್ತಿರುವುದು ಮಹತ್ತರ ಬೆಳವಣಿಗೆಯಾಗಿದ್ದು, ಕೃಷಿಗೆ ಸಂಬಂಧಿಸಿದಂತೆ ವಿದ್ಯಾಭ್ಯಾಸ ಇಲ್ಲಿ ಮಾಡಬೇಕು ಎನ್ನುವುದು ಕರಿಯಪ್ಪನವರ ಕನಸಾಗಿತ್ತು. ಆ ಕನಸು ನನಸಾಗುತ್ತಿದೆ. ಇದರಲ್ಲಿ 17 ವಿಭಾಗಗಳು ಇರಲಿವೆ. ರಾಜ್ಯಕ್ಕೆ ಮೊದಲ ಕಾಲೇಜು ಆಗಲಿದೆ ಎಂದು ಹೇಳಿದರು.

ಶಾಸಕ ಇಕ್ಬಾಲ್​ ಹುಸೇನ್​, ವಿಧಾನಪರಿಷತ್​ ಸದಸ್ಯ ಪುಟ್ಟಣ್ಣ, ಬಮುಲ್​ ಅಧ್ಯ ಡಿ.ಕೆ. ಸುರೇಶ್​, ಮಾಜಿ ಶಾಸಕ ಕೆ. ರಾಜು, ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯ ಲಕ್ಷ$್ಮಣ್​ ಇತರರು ಇದ್ದರು.

ವಸತಿ ಅಕ್ರಮ ಸುಳ್ಳು ದುಡ್ಡು ಪಡೆದು ಮನೆ ನೀಡಿದ್ದೀರಿ ಎನ್ನುವ ಶಾಸಕ ಬಿ.ಆರ್​.ಪಾಟೀಲ್​ ಅವರ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, ಇದೆಲ್ಲವೂ ಸುಳ್ಳು, ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ? ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಣ ಕೊಡಲು ಆಗುತ್ತದೆಯೇ? ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯತಿ, ಮುನಿಸಿಪಾಲಿಟಿ ಸೇರಿ ಎಲ್ಲೆಲ್ಲಿ ಮನೆ ನೀಡಬೇಕೋ ಆಯಾಯ ಸ್ಥಳಿಯ ಸಂಸ್ಥೆಗಳು ತೀರ್ಮಾನ ಮಾಡುತ್ತವೆ. ನಾವು ತೀರ್ಮಾನ ಮಾಡಲು ಆಗುತ್ತದೆಯೇ ಎಂದರು. ಬಿ.ಆರ್​.ಪಾಟೀಲ್​ ಅವರಿಗೆ ಪೂರ್ಣ ಮಾಹಿತಿ ತಿಳಿದಿದೆಯೋ ಇಲ್ಲವೊ ಗೊತ್ತಿಲ್ಲ. ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ನಾನು ಅವರ ಬಳಿ ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಸ್ಪಷ್ಟವಾಗಿ ನುಡಿದರು.

ಬೆಂಗಳೂರು ದಣ ಜಿಲ್ಲೆಯಲ್ಲಿ ಮೊದಲ ಕೃಷಿ ಮಹಾವಿದ್ಯಾಲಯ ಸ್ಥಾಪನೆಯಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ರಾಜ್ಯದಲ್ಲಿಯೇ ಇದು ಮೊದಲನೆಯದಾಗುತ್ತದೆ. ಬೆಂಗಳೂರಿಗರು ಬಂದು ಇಲ್ಲಿ ಓದುತ್ತಾರೆ. ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. ರಾಜೀವ್​ ಗಾಂಧಿ ಯೂನಿವರ್ಸಿಟಿಯು ನಿಂತು ಹೋಗಿತ್ತು. ಅದು ಈಗ ಕಾರ್ಯಾರಂಭ ಮಾಡುತ್ತಿದೆ. > ಡಿ. ಕೆ. ಶಿವಕುಮಾರ್​, ಉಪಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net