

ಬೆಂಗಳೂರು: ಓದಿದ್ದು ಎಂಬಿಎ. ಇಳಿದದ್ದು ಸರಗಳ್ಳತನಕ್ಕೆ! ಅರೆ, ಯಾವುದಾದರೂ ಕಂಪನಿಗೆ ಹೋಗಿ ಕೆಲಸ ಗಿಟ್ಟಿಸಿಕೊಂಡು ಜೀವನ ಮಾಡೋದನ್ನು ಬಿಟ್ ಅದ್ಯಾಕೆ ಕಳ್ಳನಾದ? ಎಂಬ ಪ್ರಶ್ನೆ ಮೂಡದೆ ಇರದು.
ಹೌದು, ಆತ ಎಂಬಿಎ ಪದವೀಧರ. ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಕೂಡ ಮಾಡುತ್ತಿದ್ದ. ಆದರೀಗ ಸರಗಳ್ಳತನ ಕೇಸ್ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ! ಅವರ ಹೆಸರು ಶೇಖ್ ಗೌಸ್.
ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್ನಿಂದ ಬರುತ್ತಿದ್ದ ಮಹಿಳೆಯ ಸರ ಎಗರಿಸಿದ ಶೇಖ್ ಗೌಸ್ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟ ಸತ್ಯ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
"ಸರ್..ನಾನು ಎಂಬಿಎ ಪದವೀಧರ. ಕರೋನಾ ಲಾಕ್ಡೌನ್ ವೇಳೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ್ರು. ನನಗೆ 35 ಸಾವಿರ ರೂಪಾಯಿ ಸಾಲ ಇದೆ. ಸಾಲಗಾರರ ಕಿರುಕುಳ ಹೆಚ್ಚಾಗಿತ್ತು. ಬೇರೆಡೆ ಕೆಲಸಕ್ಕೆ ಟ್ರೈ ಮಾಡಿದರೂ ಸಿಗಲಿಲ್ಲ. ಕೊನೆಗೆ ಸರಗಳ್ಳತನಕ್ಕೆ ಮುಂದಾದೆ..." ಎಂದು ಆರೋಪಿ ಹೇಳಿದ್ದಾನೆ.