

ಹನಗೋಡು: ಹೋಬಳಿಯ ಕೊತ್ತೇಗಾಲ ಗ್ರಾಮದಲ್ಲಿ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಭೆಯನ್ನು ಸೋಮವಾರ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟಿಸಿದರು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದ ಎಲ್ಲರೂ ಸಾಮರಸ್ಯೆದಿಂದ ಬದುಕಲು ದೇವಸ್ಥಾನಗಳು ಅಗತ್ಯವಾಗಿದ್ದು, ಮನುಷ್ಯನ ಮಾನಸಿಕ ನೆಮ್ಮದಿಗೂ ಅಗತ್ಯವಾಗಿವೆ. ಪ್ರಚಲಿತ ದಿನಗಳಲ್ಲಿ ಜನರಲ್ಲಿ ಧಾರ್ಮಿಕ ಚಿಂತನೆ ಜತೆಗೆ ಅಧಃಪತನಕ್ಕಿಳಿಯುತ್ತಿರುವ ನೈತಿಕತೆಯನ್ನು ಉಳಿಸಿಕೊಂಡು ಮಾನವೀಯ ಮೌಲ್ಯಗಳ ಉಳಿವಿಗಾಗಿ ಧಾರ್ಮಿಕ ಚಿಂತನೆಗಳ ಕಾರ್ಯಗಳನ್ನು ನಡೆಸುವುದು ಅತ್ಯಗತ್ಯವಾಗಿದೆ ಎಂದರು.
ಗ್ರಾಮಸ್ಥರು ಹಾಗೂ ದೇವಾಲಯ ಸೇವಾ ಸಮಿತಿಯವರು ಎಚ್.ಪಿ.ಮಂಜುನಾಥ್ ಅವರನ್ನು ಸನ್ಮಾನಿಸಿದರು. ತಾಪಂ ಮಾಜಿ ಅಧ್ಯಕ್ಷ ಡಿ.ಸದಾನಂದ, ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಗದ್ದಿಗೆ ದೇವರಾಜ್, ಪಟೇಲ್ ದೇವರಸೇಗೌಡ, ಗ್ರಾಮದ ಯ. ಅಣ್ಣಯ್ಯ, ಯ. ರಾಜಶೇಖರಯ್ಯ, ಗುಡ್ಡಪ್ಪ ಸಣ್ಣಜವರಯ್ಯ, ಮುಖಂಡರಾದ ಮಹಾವೀರ ಗೌಡ, ಕೆ ಎಂ. ಶಿವಣ್ಣ ಇತರರು ಹಾಜರಿದ್ದರು.