ಮಠ ಮಾನ್ಯಗಳಿಂದ ಸುಸ್ಥಿರ ಸಮಾಜ ಸಾಧ್ಯ

29_Hnp_Vishvakarma 2 A
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on

ಹೊಳೆನರಸೀಪುರ: ಮಠ ಮಾನ್ಯಗಳಿದ್ದರಷ್ಟೇ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಸದ ಶ್ರೇಯಸ್ ಎಂ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ವಿಶ್ವಕರ್ಮ ಸಮಾಜ ಆಯೋಜಿಸಿದ್ದ 9ನೇ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಸಮಾಜದ ನಿರ್ಮಾಣದಲ್ಲಿ ಮಠಮಾನ್ಯಗಳ ಪಾತ್ರ ಪ್ರಮುಖವಾಗಿರುತ್ತದೆ. ಅವರ ಮಾರ್ಗದರ್ಶನ ಸಲಹೆ ಸೂಚನೆಗಳಿಂದ ಸಮಾಜದ ಜನರು ಸಂಘಟಿತರಾಗಲು ಉತ್ತಮ ಮಾರ್ಗದಲ್ಲಿ ಮುನ್ನಡೆಯಲು ಸಹಕಾರಿಯಾಗುತ್ತದೆ ಎಂದರು.

ವಿಶ್ವ ನಿರ್ಮಾಣದಲ್ಲಿ ವಿಶ್ವಕರ್ಮರ ಪಾತ್ರ ಅಮೋಘವಾದದ್ದು, ಭಗವಂತನ ಆಯುಧಗಳಾಗಲಿ, ದೇವರ ಆಸ್ಥಾನಗಳಾಗಲಿ, ಭೂಲೋಕದ ಪ್ರಸಿದ್ಧ ಉತ್ತಮ ವಾಸ್ತುಶಿಲ್ಪ ಹೊಂದಿರುವ ದೇವಾಲಯಗಳಾಗಲಿ ವಿಶ್ವಕರ್ಮರ ಹೊರತಾಗಿ ನಿರ್ಮಾಣವಾಗಿಲ್ಲ. ವಿಶ್ವಕರ್ಮರ ಕೈಚಳಕದಿಂದಲೇ ಇವೆಲ್ಲವೂ ನಿರ್ಮಾಣಗೊಂಡಿವೆ. ಜಿಲ್ಲೆಯ ವಿಶ್ವಕರ್ಮ ಸಮುದಾಯದ ಶ್ರೇಯೋಭಿವೃದ್ಧಿಗೆ, ಅವರ ಬೆಂಬಲಕ್ಕೆ ಹಾಗೂ ಸಮುದಾಯದ ಸೇವೆಗೆ ಸದಾ ಮುಂದಿರುತ್ತೇನೆ ಎಂದರು.

ಸರ್ಕಾರ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಗಣತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ನಮೂದಿಸಬೇಕು. ಇದರಿಂದ ರಾಜಕೀಯ ಸ್ಥಾನಮಾನಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಗಣತಿಯಲ್ಲಿ ದೊರೆಯುವಂತಹ ಜನಾಂಗದ ಅಂಕಿ ಅಂಶಗಳಿಂದ ಯಾವುದೇ ಸರ್ಕಾರಗಳಾಗಲಿ ಸೌಲಭ್ಯಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಜಿಲ್ಲೆಯ ವಿಶ್ವಕರ್ಮ ಸಮುದಾಯದ ನಾಗರಿಕರು ಉತ್ತಮ ಕಾರ್ಯಕ್ರಮ ನಡೆಸಿರುವುದಕ್ಕೆ ಸಂತಸಗೊಂಡು ಅಭಿನಂದನೆ ಸಲ್ಲಿಸಿದರು.

ಅರೆಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ಪ್ರಾಚೀನ ಪರಂಪರೆಯ ಬೆಳವಣಿಗೆಯಲ್ಲಿ ವಿಶ್ವಕರ್ಮರ ಕೊಡಗೆ ಅಪಾರವಾಗಿದ್ದು, ಅವರ ಅಭ್ಯುದಯಕ್ಕೆ ಸಮಾಜ ಸಹಕರಿಸಬೇಕಿದೆ. ಅಂದಿನ ಬೇಲೂರು, ಹಳೇಬೀಡು ದೇವಾಲಯಗಳಿಂದ ಹಿಡಿದು ಇತ್ತೀಚಿನ ಅಯೋಧ್ಯೆಯ ಶ್ರೀರಾಮನ ವಿಗ್ರಹ ನಿರ್ಮಾಣವರೆಗೂ ಸಮುದಾಯದವರು ಛಾಪು ಮೂಡಿಸಿದ್ದಾರೆ. ಪುರಾಣದಲ್ಲಿ ವಿಶ್ವಕರ್ಮ ಸೂಕ್ತ ಎಂಬ ಉಲ್ಲೇಖ ಇದೆ. ಎಲ್ಲ ಧರ್ಮೀಣಿಯರ ಪ್ರಾರ್ಥನಾ ಮಂದಿರಗಳು, ದರ್ಗಗಳು, ಮಂದಿರಗಳ ನಿರ್ಮಾಣದಲ್ಲಿ ವಿಶ್ವಕರ್ಮರು ಕೊಡುಗೆ ನೀಡಿದ್ದಾರೆ. ಹಾಗಾಗಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

ವಿಶ್ವಕರ್ಮ ಭಾವಚಿತ್ರವನ್ನು ವಾಹನದಲ್ಲಿ ಅಲಂಕಾರಭೂಷಿತವಾಗಿ ಸ್ಥಾಪಿಸಿ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರಭು ಶಂಕರ್, ವಿಶ್ವಕರ್ಮ ಸಮಾಜದ ಹಿರಿಯರಾದ ಶಂಕರಾಚಾರ್ಯ, ಪುರಸಭೆ ಅಧ್ಯಕ್ಷ ಎಚ್.ಕೆ.ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಗಂಗಾಧರಾಚಾರಿ, ಹರೀಶ್, ಶ್ರೀನಿವಾಸ್ ಸಂತೋಷ್ ನಾರಾಯಣಾಚಾರ್ ಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net