ಕ್ರಿಕೆಟ್​ ಬಾಲ್​ ತರಲು ಹಾಸ್ಟೆಲ್​ಗೆ ಹೋದ ವಿದ್ಯಾರ್ಥಿ 4ನೇ ಮಹಡಿಯಿಂದ ಬಿದ್ದು ಸಾವು

student death
Published on

ಮಂಗಳೂರು: ಕ್ರಿಕೆಟ್​ ಚೆಂಡು ತರಲು ಹಾಸ್ಟೆಲ್​ ಕಟ್ಟಡದ ನಾಲ್ಕನೇ ಅಂತಸ್ತಿಗೆ ಹೋಗಿದ್ದ ವಿದ್ಯಾರ್ಥಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ನಗರದ ಕೊಟ್ಟಾರಚೌಕಿಯಲ್ಲಿ ಸಂಭವಿಸಿದೆ.

ವಿಜಯಪುರದ ಮೂಲದ ಪ್ರಣವ್​ ಎಸ್​.ಮುಂಡಾಸ್​(18) ಮೃತ ದುರ್ದೈವಿ. ಮಂಗಳೂರಿನ ಖಾಸಗಿ ರೆಸಿಡೆನ್ಶಿಯಲ್​ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ. ಬುಧವಾರ ಸಂಜೆ ವಿದ್ಯಾರ್ಥಿಗಳು ಕ್ರಿಕೆಟ್​ ಆಡುತ್ತಿದ್ದಾಗ ಚೆಂಡು ಹಾಸ್ಟೆಲ್​ನ ನಾಲ್ಕನೇ ಅಂತಸ್ತಿನ ಶೀಟ್​ ಮೇಲೆ ಬಿದ್ದು ಅಲ್ಲೇ ಉಳಿದುಕೊಂಡಿತ್ತು. ಅದನ್ನು ತರಲೆಂದು ಪ್ರಣವ್​ ಹೋದಾಗ ಶೀಟ್​ ಮುರಿದಿದೆ. ನಾಲ್ಕನೇ ಅಂತಸ್ತಿನಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡ ಪ್ರಣವ್​ನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ. ಕಾವೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net