ಸದೃಢ ದೇಶಕ್ಕೆ ದುಶ್ಚಟ ಮುಕ್ತ ಯುವ ಜನತೆ ಅವಶ್ಯಕ

ಸದೃಢ ದೇಶಕ್ಕೆ ದುಶ್ಚಟ ಮುಕ್ತ ಯುವ ಜನತೆ ಅವಶ್ಯಕ
Published on

ಬೇಲೂರು: ದುಶ್ಚಟ ಮುಕ್ತ ಯುವ ಜನಾಂಗದಿಂದ ಸದೃಢ ದೇಶ ಕಟ್ಟಲು ಸಾಧ್ಯ ಎಂದು ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಹೇಳಿದರು.

ದೇಶಭಕ್ತರ ಬಳಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ವಿಶೇಷ ಉಪನ್ಯಾಸ ಹಾಗೂ ಮಾದಕ ದ್ರವ್ಯ ವ್ಯಸನ ಮತ್ತು ವ್ಯಸನ ಮುಕ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಯುವ ಜನಾಂಗ ಎಚ್ಚೆತ್ತು ತಮ್ಮ ಜವಾಬ್ದಾರಿ ಅರಿತು ಮಾದಕ ದ್ರವ್ಯ ವ್ಯಸನದಿಂದ ದೂರವಿದ್ದರೆ ಆರೋಗ್ಯಕರ ಜೀವನದೊಂದಿಗೆ ಸತ್ಪ್ರಜೆಗಳಾಗಿ ಜೀವನ ಸಾರ್ಥಕ ಪಡಿಸಿಕೊಳ್ಳಬಹುದು. ಮಾದಕ ದ್ರವ್ಯ, ವಿಪರೀತ ಮೊಬೈಲ್ ಚಟ, ಮಾದಕ ಸಿರಪ್‌ಗಳನ್ನು ಕುಡಿಯುವುದು. ಮದ್ಯಪಾನ ಮಾಡುವುದು. ಧೂಮಪಾನದ ಚಟಗಳಿಂದ ದೂರವಿದ್ದಷ್ಟು ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯಬಹುದು ಎಂದರು.

ಹೆಬ್ಬಾಳು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಅನುಪಮಾ ಶೆಟ್ಟಿ ಮಾತನಾಡಿ, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿ ಕೊಳ್ಳುವಂತೆ ಯುವಜನತೆಗೆ ಕರೆ ನೀಡಿದರು.

ದೇಶಭಕ್ತರ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ ಮೆಡಿಕಲ್ಸ್ ಮಹೇಶ್, ಖಜಾಂಚಿ ಪ್ರಕಾಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ್, ವೈಡಿಡಿ ಕಾಲೇಜು ಪ್ರಾಂಶುಪಾಲ ಮಹೇಶ್, ಉಪನ್ಯಾಸಕ ವೀರಭದ್ರಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net