ಗಮನಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

ಗಮನಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ
Published on

ಕೆ.ಆರ್.ಸಾಗರ: ದಸರಾ ಹಬ್ಬದ ಹಿನ್ನಲೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿರುವ ಗಾಜಿನ ಮನೆಯಲ್ಲಿ ಆಯೋಜನೆ ಮಾಡಿರುವ ಫಲಪುಷ್ಪ ಪ್ರದರ್ಶನ ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ.

ಕೆ.ಆರ್.ಸಾಗರ ತೋಟಗಾರಿಕೆ ಇಲಾಖೆಯೂ ಕಾವೇರಿ ನೀರಾವರಿ ನಿಗಮದ ಸಹಯೋಗದೊಂದಿಗೆ ಬೃಂದಾವನದ ಪ್ರವಾಸಿಗರ ಪ್ರವೇಶ ದ್ವಾರದ ಬಳಿಯ ಎಡಭಾಗದಲ್ಲಿ 50ಮತ್ತು150 ಅಡಿ ವಿಸ್ತೀರ್ಣದ ಗಾಜಿನ ಮನೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪುಷ್ಪಗಳನ್ನು ಬಳಸಿ ಪುಷ್ಪಪ್ರರ್ದಶನ ಏರ್ಪಡಿಸಿದ್ದು, ಇಲ್ಲಿನ ಪುಷ್ಪಗಳು ಸೇರಿದಂತೆ ಅನೇಕ ಕಲಾಕೃತಿಗಳು ಪ್ರವಾಸಿಗರ ಸೆಳೆಯುತ್ತಿವೆ.

ಪೆಟೋನಿಯ, ಸಾಲ್ವಿಯ, ವಿಂಕಾ, ಜಿನಿಯಾ ಸೇರಿದಂತೆ ವಿವಿಧ ಜಾತಿಯ ಅಲಂಕಾರಿಗಳ ಗಿಡಗಳು ಸೇರಿದಂತೆ, ವಿವಿಧ ರೀತಿಯ ಹಣ್ಣುಗಳು, ಬೋನ್ಸಾಯ್ ಗಿಡಗಳು, ತರಕಾರಿಗಳಲ್ಲಿ ಪ್ರಖ್ಯಾತರ ಪ್ರತಿಕೃತಿ ಕೆತ್ತನೆಗಳು, ಪರ್ಟಿಕಲ್ ಉದ್ಯಾನವನ ಸೇರಿದಂತೆ ಗಾಜಿನ ಮನೆಯ ಪ್ರವೇಶ ದ್ವಾರದಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಯ ಕಾವೇರಿ ಮಾತೆಯ ಪ್ರತಿಮೆ, ಚಾಮುಂಡಿ ಬೆಟ್ಟದ ದೇವಾಲಯ, ಕರ್ನಾಟಕ ಭೂಚಿತ್ರ, ಆನೆ, ಹಂಸ, ಟೆಡಿಬೇರ್, ಕೃಷ್ಣರುಕ್ಮಣಿ, ಪುಷ್ಪಗಳ ಕಲಾಕೃತಿ ಸೇರಿದಂತೆ ಪ್ರಾಣಿಗಳು ಮತ್ತು ಕಾರ್ಟೋನ್ ಪುಷ್ಪಗಳ ಕೆತ್ತನೆ ಆರ್ಕಷಣೆಯ ಕೇಂದ್ರ ಬಿಂದುವಾಗಿದೆ.

ಕೆ.ಆರ್.ಸಾಗರ ತೋಟಗಾರಿಕೆವಲಯ ಹಾಗೂ ಕಾವೇರಿ ನೀರಾವರಿ ನಿಗಮದ ಸಹಯೋಗದೊಂದಿಗೆ ಈ ಫಲಪುಷ್ಪ ಪ್ರದರ್ಶನ ನಡೆಸಲಾಗುತ್ತಿದ್ದು, ಬೃಂದಾವನ ವೀಕ್ಷಣೆಗೆ ಬರುವ ಪ್ರವಾಸಿಗರು ಉಚಿತ ಪ್ರವೇಶವಿರುವ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದುದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net