ಜೈ ಶ್ರೀರಾಮ್, ಜೈ ಆಂಜನೇಯ... ಶ್ರೀರಂಗಪಟ್ಟಣದ ಬನ್ನಿಮಂಟಪದಲ್ಲಿ ಮೊಳಗುತ್ತಿದೆ ಘೋಷವಾಕ್ಯ

Srirangapatnam
Published on

ಮೈಸೂರು: ಜೈ ಶ್ರೀರಾಮ್, ಜೈ ಆಂಜನೇಯ... ನಾವೆಲ್ಲರೂ ಹಿಂದೂ...‌ ನಾವೆಲ್ಲರೂ ಒಂದೇ... ಜೈ ಶ್ರೀರಾಮ್... ಎಂಬ ಘೋಷವಾಕ್ಯ ಶ್ರೀರಂಗಪಟ್ಟಣದ ಬನ್ನಿಮಂಟಪದಲ್ಲಿ ಮೊಳಗಿದೆ.

ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಕುರಿತ ವಿವಾದ ಭುಗಿಲೆದ್ದಿದ್ದು, ಶನಿವಾರ ಬೆಳಗ್ಗೆಯೇ ನೂರಾರು ಹಿಂದು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದು, ಜೈ ಶ್ರೀರಾಮ್​ ಘೋಷಣೆ ಕೂಗುತ್ತಿದ್ದಾರೆ. ವಿಶ್ವ ಹಿಂದು ಪರಿಷತ್​ ವತಿಯಿಂದ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಟ್ಟಣದಾದ್ಯಂತ ಜೂ.5ರ ಮುಂಜಾನೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಮೆರವಣಿಗೆ ಕೈಬಿಟ್ಟ ಹಿಂದು ಸಂಘಟನೆಗಳು ಬನ್ನಿಮಂಟಪದ ಬಳಿ ಹನುಮಾನ್​ ಚಾಲೀಸಾ ಪಠಣ ಮಾಡುತ್ತಿವೆ. ಇಡೀ ಬನ್ನಿಮಂಟಪ ಕೇಸರಿಮಯವಾಗಿದ್ದು, ಜೈ ಶ್ರೀರಾಮ್... ಘೋಷಣೆ ಕೂಗುತ್ತಿದ್ದಾರೆ.

ಆಟೋ, ಬೈಕ್‌, ಕಾರುಗಳ ಮೂಲಕ ಏಕಕಾಲಕ್ಕೆ ನೂರಾರು ಸಂಖ್ಯೆಯಲ್ಲಿ ಬನ್ನಿಮಂಟಪದ ಬಳಿಗೆ ಕೇಸರಿ ಧ್ವಜ ಹಿಡಿದು ಹಿಂದು ಕಾರ್ಯಕರ್ತರು ಆಗಮಿಸಿದರು. ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಬನ್ನಿಮಂಟಪದಲ್ಲಿ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಪೂಜೆ ಮಾಡಿ ಭಜನೆ ಆರಂಭಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net