ಪದ್ಮನಾಭನಗರ ಕೇಸರಿ ಮಯ: ಶ್ರೀರಾಮ ರಥಯಾತ್ರೆಗೆ ಚಾಲನೆ

sriramanavani banglore
Published on

ಬೆಂಗಳೂರು: ಪದ್ಮನಾಭನಗರದ ಪ್ರಮುಖ ರಸ್ತೆ ಸಂಪೂರ್ಣ ಕೇಸರಿ ಮಯಗೊಂಡಿದೆ. ಶ್ರೀರಾಮ ನವಮಿ ಪ್ರಯುಕ್ತ ಆಯೋಜಿಸಿರುವ ಶ್ರೀರಾಮ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ್​, ಸ್ವಾಮೀಜಿ ಮಾದಾರ ಚೆನ್ನಯ್ಯ, ಸಂಸದ ತೇಜಸ್ವಿ ಸೂರ್ಯ ಅವರುಗಳು ಶ್ರೀರಾಮನ ರಥಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ರಸ್ತೆ ಉದ್ದಕ್ಕೂ ಶ್ರೀರಾಮನ ಭಜನೆ, ನೃತ್ಯ ಮಾಡುವ ಮೂಲಕ ರಥ ಯಾತ್ರೆ ಮುಂದೆ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net