ತಿಪಟೂರಿನ ಕೆರೆಗೋಡಿ-ರಂಗಾಪುರ ಮಠಕ್ಕೆ ಷಣ್ಮುಖಸ್ವಾಮಿ ಉತ್ತರಾಧಿಕಾರಿ

Keregodi Rangapur Math
Published on

ತಿಪಟೂರು: ಕೆರೆಗೋಡಿ-ರಂಗಾಪುರ ಸುಕ್ಷೇತ್ರದ 8ನೇ ಉತ್ತರಾಧಿಕಾರಿಯನ್ನಾಗಿ ಷಣ್ಮುಖಸ್ವಾಮಿ ಅವರನ್ನು ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಆಯ್ಕೆ ಮಾಡಿದರು.

ಶ್ರೀಮಠದಲ್ಲಿ ಗುರುಸಪ್ತಾಹ ನಡೆಯುತ್ತಿರುವ ಸಂದರ್ಭದಲ್ಲಿಯೇ ಶ್ರೀಮಠದ ಮನೆ ವಂಶಸ್ಥರಾದ ದಿ.ಏಜೆಂಟ್​ ಶಿವನಂಜಪ್ಪ ಅವರ 3ನೇ ಪುತ್ರ ಶ್ರೀ ರೇಣುಕಾರಾಧ್ಯ ಹಾಗೂ ಶಂಕರಮಣಿ ದಂಪತಿಯ ಕಿರಿಯ ಪುತ್ರ, 35 ವರ್ಷದ ಷಣ್ಮುಖಸ್ವಾಮ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದ ಶ್ರೀಗಳು, ಭಾನುವಾರ ಅವರ ಮನೆಗೆ ತೆರಳಿ ಸರಳವಾಗಿ ಪೂಜಾ ವಿಧಿವಿಧಾನ ಮುಗಿಸಿದರು. ನಂತರ ಮನೆಯವರೆಲ್ಲರ ಸಮ್ಮತಿಯೊಂದಿಗೆ ಷಣ್ಮುಖಸ್ವಾಮಿ ಅವರನ್ನು ಶ್ರೀ ಮಠಕ್ಕೆ ಕರೆದುಕೊಂಡು ಬಂದರು.

ಶಂಕರೇಶ್ವರ, ರಂಗನಾಥಸ್ವಾಮಿ ದೇಗುಲಗಳು ಸೇರಿ ಶ್ರೀ ಮಠದ ಹಿರಿಯ ಶ್ರೀಗಳ ಗದ್ದುಗೆಗಳಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು.

ಸ್ನೇಹಿತರು, ಸಂಬಂಧಿಗಳು ಮತ್ತು ಪಾಲಕರ ಒಪ್ಪಿಗೆ ಮೇರೆಗೆ ಉತ್ತರಾಧಿಕಾರಿ ಆಯ್ಕೆ ನಡೆದಿದೆ. ಗುರುಪರಂಪರೆ ವಂಶ ಪಾರಂಪರ್ಯವಾಗಿ ಬಂದಿದ್ದರೂ, ಇನ್ನಿವರು ಮಠಕ್ಕೆ ಸೇರಿದವರು. ಪಿತೃ ವಾತ್ಸಲ್ಯ, ಸಂಬಂಧಿ, ಸ್ನೇಹಿತ ಎಂಬ ಭಾವನೆಗಳನ್ನು ತ್ಯಜಿಸಿ, ಎಲ್ಲರೂ ಸಾಮಾನ್ಯ ಭಕ್ತರಂತೆ ಮಠಕ್ಕೆ ಬಂದು ಹೋಗಬಹುದೇ ವಿನಃ ಬಯಸಿದಾಗ ಬಂದು ಹೋಗುವಂತಿಲ್ಲ.

| ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ ಕೆರೆಗೋಡಿ-ರಂಗಾಪುರ ಸುಕ್ಷೇತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net