ರಾಷ್ಟ್ರಪತಿಗಳಿಂದ ಇಸ್ಕಾನ್​ ಶ್ರೀ ರಾಜಾಧಿರಾಜ ಗೋವಿಂದ ದೇಗುಲ ಲೋಕಾರ್ಪಣೆ

Hon'ble President of India Shri Ramnath Kovind ji graces the Lokarpana ceremony of Sri Rajadhiraja Govinda Temple at Bengaluru
Published on

ಬೆಂಗಳೂರು: ಬೆಂಗಳೂರು ಹೊರವಲಯದ ಕನಕಪುರ ರಸ್ತೆಯ ದೊಡ್ಡ ಕಲ್ಲಸಂದ್ರ ಬಳಿಯ ವೈಕುಂಠ ಬೆಟ್ಟದಲ್ಲಿ ಇಸ್ಕಾನ್​ನಿಂದ ನಿರ್ಮಿಸಲಾಗಿರುವ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಂಗಳವಾರ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ, ಈ ದೇಗುಲ ಅತ್ಯಂತ ಸುಂದರವಾಗಿದೆ. ಭಕ್ತಿಭಾವದ ಪ್ರತೀಕವಾಗಿದ ದೇಗುಲದಲ್ಲಿ ಶಾಂತಿ ನೆಲೆಸಿದೆ. ದೇಗುಲದಲ್ಲಿನ ಕಲ್ಲಿನಲ್ಲಿ ಕೆತ್ತಿರುವ ಕಲೆಯನ್ನ ನೋಡುವುದೇ ಕಣ್ಣು ಮತ್ತು ಮನಸ್ಸಿಗೆ ಹಿತವಾಗಿದೆ. ನನಗಂತೂ ಇಲ್ಲಿನ ಸೊಬಗು ಇಷ್ಟವಾಯಿತು ಎಂದು ಬಣ್ಣಿಸಿದರು.

ತಿರುಪತಿ ತಿರುಮಲ ದೇವಾಲಯ ಹೋಲುವ ಮಾದರಿಯಲ್ಲೇ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ರಾಮನಾಥ್ ಕೋವಿಂದ್ ಮತ್ತು ಇವರ ಧರ್ಮಪತ್ನಿ ಸವಿತಾ ಕೋವಿಂದ್ ಅವರು ದೇವರ ದರ್ಶನ ಪಡೆದರು. ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

ಕಾರ್ಯಕ್ರಮ ಮುಗಿದ ಬಳಿಕ ದೆಹಲಿಗೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬೀಳ್ಕೊಟ್ಟರು. ರಾಜ್ಯಪಾಲರಾದ ಥಾವರ್​ಚಂದ್ ಗೆಹ್ಲೋಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net