ಪರೋಪಕಾರ ಮನೋಭಾವ ಅಗತ್ಯ

2hgr1
Published on

ಹಲಗೂರು: ಸಮೀಪದ ಷಡಕ್ಷರಿ ಗವಿಮಠ ಹಾಗೂ ಏಕದಳ ಬಿಲ್ಪಪತ್ರೆ ಕ್ಷೇತ್ರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶಮಿ ಪೂಜೆ ಹಾಗೂ ತೆಪ್ಪೋತ್ಸವ ಅಪಾರ ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.

ಬುಧವಾರ ಬೆಳಗ್ಗೆ ಬನ್ನಿ ಮರಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಮಠದ ಪಕ್ಕದಲ್ಲಿರುವ ಕೊಳದಲ್ಲಿ ತೋಟಹಳ್ಳಿ ಮಠದ ಶ್ರೀಬಸವ ಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಗವಿಮಠದ ಷಡಕ್ಷರ ಸ್ವಾಮೀಜಿ ಮತ್ತು ಹರಚರ ಗುರುಗಳ ಸಮ್ಮುಖದಲ್ಲಿ ತೆಪ್ಪೋತ್ಸವ ನೆರವೇರಿತು. ಕಾರ್ಯಕ್ರಮವನ್ನು ತೋಟಹಳ್ಳಿ ಮಠದ ಶ್ರೀಬಸವ ಪ್ರಭು ಸ್ವಾಮೀಜಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ವಿಶ್ವವಿದ್ಯಾನಿಲಯದ ಕರ್ನಾಟಕ ಸಂಸ್ಕೃತ ಸಂಶೋಧನಾ ಕೇಂದ್ರದ ಡಾ.ಸುಮಿತ್ರಾ ಪೂಜಾರಿ ಮಾತನಾಡಿ, ಪರೋಪಕಾರಿಯಾದ ಮರಗಳು ಹಣ್ಣುಗಳನ್ನು, ಹಸು ಹಾಲನ್ನು, ನದಿಗಳು ನೀರನ್ನು ನಮಗೆ ನೀಡುತ್ತವೆ. ಮನುಷ್ಯರಿಗೆ ಉತ್ತಮ ಅಲೋಚನಾ ಶಕ್ತಿ ಇದ್ದು, ಇಂತಹ ಪರೋಪಕಾರಿ ಗುಣಗಳನ್ನು ಮೈಗೂಡಿಸಿಕೊಂಡು ಧರ್ಮ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ನಿಟ್ಟಿನಲ್ಲಿ ಷಡಕ್ಷರ ಸ್ವಾಮೀಜಿ ಎಲ್ಲರೂ ಆರೋಗ್ಯವಂತರಾಗಿರಬೇಕು, ಶಿಕ್ಷಣವಂತರಾಗಿರಬೇಕು ಎಂಬ ಉದ್ದೇಶದೊಂದಿಗೆ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗವಿಮಠದ ಮಠಾಧೀಶ ಶ್ರೀಷಡಕ್ಷರ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚು ಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದು, ನಾನು ಆಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಹ ಇದೇ ರೀತಿ ಇನ್ನೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದರು.

ಈ ಬಾರಿ ಭಕ್ತರಿಗೆ ಆರೋಗ್ಯ ಉಚಿತ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ನಡೆಸಲಾಗುತ್ತಿದ್ದು, ಇದಕ್ಕೆ ಬೆಂಗಳೂರಿನ ವಿಜಯ ಸಂಜೆ ಕಾಲೇಜಿನ ಉಪ ಪ್ರಾಂಶುಪಾಲ ಶಾಂತರಾಜ್ ಹೆಚ್ಚು ಸಹಕಾರ ನೀಡಿದ್ದಾರೆ ಎಂದರು. ಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಇದೇ ವೇಳೆ ಡಿ.ಹಲಸಹಳ್ಳಿ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಜುಬೇದಾ ಖಾನಂ, ಕೆ.ಸಿ.ನಿಸರ್ಗಾ, ಕೆ.ಎಂ.ಧನುಶ್ರೀ, ದೀಪಿಕಾ, ವರ್ಷಿಣಿ, ಕೀರ್ತನಾ, ಪವನ್ ಮತ್ತು ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ಯು.ಎನ್.ಯಮುನಾ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಮಠಗಳ ಮಠಾಧೀಶರು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಮನಗರ ತಾಲೂಕು ಘಟಕದ ಶಂಕ್ರಪ್ಪ, ಶಿವನಸಮುದ್ರ ವಿದ್ಯುತ್ ಉತ್ಪಾದನಾ ಕೇಂದ್ರದ ಇಇ ಜೆ.ಸಿದ್ದಲಿಂಗಸ್ವಾಮಿ, ಮಹೇಶ್ ಕುಮಾರ್, ಶಂಕರೇಗೌಡ, ಮಂಡ್ಯ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಕಲ್ಪನಾ ಕೃಷ್ಣೇಗೌಡ, ಚಂದ್ರಶೇಖರ, ರಾಗಿ ಬೊಮ್ನಳ್ಳಿ ಮಹದೇವಸ್ವಾಮಿ, ಡಿ.ಹಲಸಹಳ್ಳಿ ತೊಟ್ಟಿ ಮನೆ ಚೆನ್ನಪ್ಪ, ಸಿದ್ದಲಿಂಗ ಸ್ವಾಮಿ, ಡಿ .ರಾಮು, ಮರಿ ಮಾದಪ್ಪ, ನಟರಾಜು, ಸುನಿಲ್, ಕುಮಾರ್, ಮಹಾದೇವಸ್ವಾಮಿ, ಸೋಮಶೇಖರ ,ಬಸವೇಶ್ವರ, ರಾಜೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net