ಹಲ್ಲಿಯನ್ನೇ ತಿಂದು ಮುಗಿಸಿದ ಜೇಡ! ಕಡಬ ತಾಲೂಕಿನಲ್ಲಿ ಪ್ರಕೃತಿಯ ವೈಚಿತ್ರ್ಯ

spider lizard
Published on

ದಕ್ಷಿಣ ಕನ್ನಡ: ಹಲ್ಲಿ ತನ್ನ ಆಹಾರಕ್ಕಾಗಿ ಜೇಡ ಸಹಿತ ಇತರೆ ಕೀಟಗಳನ್ನು ತಿನ್ನುವುದು ಸಾಮಾನ್ಯ. ಆದರೆ ಇಲ್ಲೊಂದು ಜೇಡ ಹಲ್ಲಿಯನ್ನೇ ತಿಂದಿದೆ!

ಹೌದು, ಇಂತಹ ಘಟನೆ ದಕ್ಷಿಣಕನ್ನಡ ಜಿಲ್ಲೆ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಸಂಭವಿಸಿದೆ. ಕಾಂಜಿ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀವತ್ಸ ಕಾಂಜಿ ಅವರ ಮನೆಯಲ್ಲಿ ಜೇಡರ ಹುಳುವೊಂದು ಹಲ್ಲಿಯನ್ನು ತಿಂದಿದೆ.

ಪ್ರಕೃತಿಯ ವೈಚಿತ್ರ್ಯಕ್ಕೆ ಈ ಘಟನೆ ಸಾಕ್ಷಿಯಾಗಿದ್ದು, ಹಲ್ಲಿಯು ತನ್ನ ಆಹಾರವಾಗಿ ಜೇಡವನ್ನು ಬಳಸಿಕೊಂಡಿರುವ ದೃಶ್ಯ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net