ಸಮೃದ್ಧ ಮಳೆಗಾಗಿ ಅಡ್ಡಲಿಗೆ ತುಂಬಿಸಿ ವಿಶೇಷ ಪೂಜೆ

NRD MALE POOJE
Published on

ನರಗುಂದ: ಸಮೃದ್ಧ ಮಳೆಗಾಗಿ ಪ್ರಾರ್ಥಿಸಿ ರೈತ ಸೇನಾ ಕರ್ನಾಟಕ ಸಂಘಟನೆ ಸದಸ್ಯರು ಪಟ್ಟಣದಲ್ಲಿ ಬನ್ನಿ ಮಹಾಂಕಾಳಿ ದೇವಿಗೆ ಶುಕ್ರವಾರ (ಪರ್ವ) ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಿದರು.


ಬೆಳಗ್ಗೆ 9 ಗಂಟೆಗೆ ಐದು ಜನ ಜೋಗತಿಯರಿಂದ ಬನ್ನಿಮಹಾಂಕಾಳಿಗೆ ಅಡ್ಡಲಿಗೆ ತುಂಬಿಸಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರಿಗೆ ಅಂಬಲಿ ನೈವೇದ್ಯ ವಿತರಿಸಲಾಯಿತು.


ರೈತ ಸೇನಾ ಕರ್ನಾಟಕ ಸಂಘಟನೆ ಮುಖಂಡ ಫಕೀರಪ್ಪ ಜೋಗಣ್ಣವರ ಮಾತನಾಡಿ, ಮುಂಗಾರು ಮಳೆ ನೆಚ್ಚಿಕೊಂಡು ತಾಲೂಕಿನ ಸಾವಿರಾರು ರೈತರು ಹೆಸರು ಮುಂತಾದ ಅಲ್ಪಾವಧಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.

ಆದರೆ, ಇದುವರೆಗೆ ಸಮೃದ್ಧ ಮಳೆ ಸುರಿದಿಲ್ಲ. ಬಿತ್ತನೆ ಮಾಡಿದ್ದ ಕೆಲವೊಂದು ಬೆಳೆಗಳು ಮೊಳಕೆಯೊಡೆಯದೆ ಜಮೀನಿನಲ್ಲಿಯೇ ಕಮರಿ ಹೋಗಿವೆ. ತೇವಾಂಶ ಕೊರತೆ ಆಗಿರುವುದರಿಂದ ಕೆಲವರು ತಾವು ಬಿತ್ತನೆ ಮಾಡಿದ್ದ ಬೆಳೆಗಳನ್ನು ತಮ್ಮ ಕೈಯ್ಯರೆ ಹರಗುತ್ತಿದ್ದಾರೆ.

ಬೀಜ, ಗೊಬ್ಬರ, ಬಿತ್ತನೆಗೆಂದು ಸಾವಿರಾರು ರೂ. ಖರ್ಚು ಮಾಡಿದ್ದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬನ್ನಿ ಮಹಾಂಕಾಳಿಗೆ ಮಳೆಗಾಗಿ ಪರ್ವ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.


ವಾಸು ಚವ್ಹಾಣ, ಅರ್ಜುನ ಮಾನೆ, ಎ.ಪಿ. ಪಾಟೀಲ, ಶ್ರೀಶೈಲ ಮೇಟಿ, ಮಂಜುಳಾ ಸರನಾಯ್ಕರ್, ಸರಸ್ವತಿ ತೋಡಕರ, ಈರಬಸಪ್ಪ ಹೂಗಾರ, ಪರುಶುರಾಮ ಜಂಬಗಿ, ವಿಜಯಕುಮಾರ ಹೂಗಾರ, ಬೀಬಿಜಾನ ಚಳಗೇರಿ, ಅಂಬವ್ವ ಮಾನೆ, ಶಾಂತವ್ವ ತೋಡಕರ, ಗೀತಾ ಜಾಧವ, ದೇವಕ್ಕ ಚಲುವಣ್ಣವರ, ಬಸಪ್ಪ ಗುಡದರಿ, ಎಸ್.ಕೆ. ಗಿರಿಯಣ್ಣವರ, ಮಾರುತಿ ಯಾಧವ, ಬಸಪ್ಪ ಹಾಲವರ, ಫಕೀರಪ್ಪ ಅಂಬಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net