ನಾರಾಯಣ ಹೃದಯಾಲಯದಲ್ಲಿ 100 ಹಾಸಿಗೆಯುಳ್ಳ ಕೋವಿಡ್​ ವಾರ್ಡ್​ ಉದ್ಘಾಟಿಸಿದ ಸೌರವ್ ಗಂಗೂಲಿ

ganguly
Published on

ಆನೇಕಲ್: ಬೊಮ್ಮಸಂದ್ರದ ನಾರಾಯಣ ಹೃದಯಾಲಯದಲ್ಲಿ ನೂರು ಐಸಿಯು ಬೆಡ್​ವುಳ್ಳ ಕೋವಿಡ್​ ವಾರ್ಡ್​ನ್ನು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಉದ್ಘಾಟಿಸಿದರು.

ಡಾ.‌ ದೇವಿಶೆಟ್ಟಿ ಅವರ ಜತೆ ಬಹಳ ಹಿಂದಿನಿಂದಲೂ ಸ್ನೇಹ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.‌ದೇವಿಶೆಟ್ಟಿ ಅವರ ಕಾರ್ಯ ಶ್ಲಾಘನೀಯ. ಸಿನಿಮಾ‌ ನಟರೇ ಆಗರಲಿ, ಸ್ಪೋರ್ಟ್ ಪರ್ಸನ್ ಆಗಿರಲಿ, ಸಾಮಾನ್ಯ ಜನರೇ ಆಗಿರಲಿ, ಎಲ್ಲರಿಗೂ ಆರೋಗ್ಯ ಬೇಕು ಎಂದರು.

ಎರಡು ವರ್ಷಗಳ ನಂತರ ಬೆಂಗಳೂರಿಗೆ ಬಂದಿದ್ದೇನೆ. ಎರಡು ವರ್ಷದಲ್ಲಿ ಬೆಂಗಳೂರು 20 ವರ್ಷದಷ್ಟು ಬದಲಾಗಿದೆ. ಬೆಂಗಳೂರು ಒಂದು ಸುಂದರ ನಗರ ಎಂದು ಗಂಗೂಲಿ ಬಣ್ಣಿಸಿದರು.

ಕೋವಿಡ್​ ಮೂರನೇ ಅಲೆಗೆ ನಾವು ಬಂದು ನಿಂತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೋಂಕು ಕಾಣಿಸಬಹುದು. ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳವ ಜತೆಗೆ ಮಾಸ್ಕ್, ಸ್ಯಾನಿಟೈಸರ್​ ಬಳಸಬೇಕು ಎಂದು ಡಾ. ದೇವಿಶೆಟ್ಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net