ಕುಡಿದ ನಶೆಯಲ್ಲಿ ಹೆತ್ತಮ್ಮನನ್ನೇ ಕೊಂದ ಪುತ್ರ

FotoJet (2)
Published on

ಅಕ್ರಮ ಸಂಬಂಧ ಹಿನ್ನೆಲೆ ಬೇಸತ್ತು ಕೃತ್ಯ | ಬೆಟ್ಟದಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿಯ ಬಂಧನ


ಗೌರಿಬಿದನೂರು: ಕುಡಿದ ನಶೆಯಲ್ಲಿ ಹೆತ್ತ ತಾಯಿಯನ್ನು ಕಲ್ಲಿನಿಂದ ಹೊಡೆದು ಮಗನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಹೊಸಹಳ್ಳಿಯಲ್ಲಿ ನಡೆದಿದೆ.
ಗ್ರಾಮಾದ ರಾಮಾಂಜಿನಮ್ಮ (50) ಮೃತೆ. ಚಂದ್ರಶೇಖರ್ (32) ಕೊಲೆ ಮಾಡಿದ ಪುತ್ರ.
ಕೂಲಿ ಮಾಡುತ್ತಿದ್ದ ರಾಮಾಂಜಿನಮ್ಮ ಮದ್ಯವ್ಯಸನಿಯಾಗಿದ್ದು, ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ತಾಯಿ - ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ವಿವಾಹಿತನಾಗಿದ್ದ ಚಂದ್ರಶೇಖರ್ ಪತ್ನಿಯೊಂದಿಗೆ ಬೇರೆ ಮನೆಯಲ್ಲಿ ವಾಸವಿದ್ದ. ಮಂಗಳವಾರ ರಾತ್ರಿ ಕುಡಿದ ಮತ್ತಿನಲ್ಲಿ ತಾಯಿ - ಮಗನ ನಡುವೆ ಜಗಳವಾಗಿದೆ. ಈ ವೇಳೆ ಚಂದ್ರಶೇಖರ್ ತಾಯಿಗೆ ಕಲ್ಲಿನಿಂದ ಹೊಡೆದಿದ್ದು, ರಾಮಾಂಜಿನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಮಾಡಿದ ನಂತರ ಸಮೀಪದ ಬೆಟ್ಟದಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ವೃತ್ತ ನಿರೀಕ್ಷಕ ಕೆ.ಪಿ. ಸತ್ಯನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net