ಇಂದಿನಿಂದ 5 ದಿನ ವಿವಿಧ ರೈಲುಗಳ ಸಂಚಾರ ರದ್ದು

hubli train
Published on

ಹುಬ್ಬಳ್ಳಿ: ಗದಗ ಬೈಪಾಸ್​-ಗದಗ-ಹೊಂಬಳ ಮಧ್ಯೆ ನಡೆದಿರುವ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿಯಿಂದಾಗಿ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಮಾ.7ರಿಂದ 11ರವರೆಗೆ ಸೊಲ್ಲಾಪುರ-ಎಸ್​ಎಸ್​ಎಸ್​ ಹುಬ್ಬಳ್ಳಿ ಪ್ಯಾಸೆಂಜರ್​ ಸ್ಪೆಷಲ್​ ಹಾಗೂ ಎಸ್​ಎಸ್​ಎಸ್​ ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್​ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಭಾಗಶಃ ರದ್ದು: ಮಾ.10ರವರೆಗೆ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್​- ಗದಗ ಎಕ್ಸ್​ಪ್ರೆಸ್​ ರೈಲು ಸಂಚಾರ ಬಾಗಲಕೋಟೆ- ಗದಗ ಮಧ್ಯೆ ರದ್ದಾಗಿದ್ದು, ಈ ರೈಲು ಬಾಗಲಕೋಟೆವರೆಗೆ ಮಾತ್ರ ಸಂಚರಿಸಲಿದೆ. ಮಾ.7ರಿಂದ 11ರ ವರೆಗೆ ಗದಗ-ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್​ ಎಕ್ಸ್​ ರೈಲು ಸಂಚಾರ ಗದಗ-ಬಾಗಲಕೋಟೆ ಮಧ್ಯೆ ರದ್ದಾಗಿದ್ದು, ಈ ರೈಲು ಬಾಗಲಕೋಟೆಯಿಂದ ಸಂಚಾರ ಪ್ರಾರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net