ವಿಧಾನಸೌಧದ ಮೊದಲ ಮಹಡಿಯಲ್ಲಿ ಹಾವು ಪತ್ತೆ!

Vidhana Soudha
Published on

ಬೆಂಗಳೂರು: ವಿಧಾನಸೌಧದಲ್ಲಿ, ಅಧಿವೇಶನದ ನಡೆಯುತ್ತಿದ್ದು, ಈ ಮಧ್ಯೆ ವಿಧಾನಸೌಧದ ಸರ್ಕಾರದ ಮಹತ್ವದ ಹಳೆಯ ದಾಖಲೆಗಳಿರುವ ಕೊಠಡಿಯೊಳಗೆ ಹಾವೊಂದು ಕಾಣಿಸಿಕೊಂಡಿದೆ.

ಹಾವನ್ನು ನೋಡುತ್ತಿದ್ದಂತೆ ಪತ್ರಗಾರ ಇಲಾಖೆ ಸಿಬ್ಬಂದಿ ಆತಂಕಗೊಂಡಿದ್ದು, ಕೂಡಲೇ ಉರಗ ರಕ್ಷಕರನ್ನು ಕರೆಸಿದ ವಿಧಾನಸೌಧದ ಸಿಬ್ಬಂದಿಗಳು, ಹಾವು ಹಿಡಿಸಿದ್ದಾರೆ. ವಿಧಾನಸೌಧದಲ್ಲಿ ಇಲಿಗಳು ಹೆಚ್ಚಾಗಿವೆ, ಹೀಗಾಗಿಯೇ ಹಾವುಗಳ ಕಾಟ ಕೂಡ ಹೆಚ್ಚಳವಾಗಿದೆಯೆಂದು ಸಿಬ್ಬಂದಿ ಹೇಳುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೊದಲ ವಿಧಾನಸಭಾ ಅಧಿವೇಶನ ಆರಂಭವಾಗಿದ್ದು, ಅಧಿವೇಶನದ ಕಾರ್ಯ ಕಲಾಪ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net