ವ್ಯಾಪಾರಕ್ಕೆ ಮುಖ್ಯ ನಗು ಮುಖ: ಡಾ.ಅಶೋಕ್​ ಸಲಹೆ

Bel_business
Published on

ಬೆಳ್ತಂಗಡಿ: ಕಲಿತ ವಿದ್ಯೆಯನ್ನು ಗ್ರಾಹಕರಿಗೆ ತಲುಪಿಸಲು ಸೇವೆಯ ಜತೆಗೆ ಮುಖದಲ್ಲಿ ನಗು ಇರಬೇಕು. ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಕ್ರಮಗಳು ಹಲವು ಇವೆ. ಎಲ್ಲವೂ ಮಾದರಿ ಸಂಸ್ಥೆಗಳಾಗಿವೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಶೋಕ್​ ಕುಮಾರ್​ ಹೇಳಿದರು.

ಉಜಿರೆ ರುಡ್​ಸೆಟ್​ ಸಂಸ್ಥೆಯಲ್ಲಿ 30 ದಿನಗಳ ಕಂಪ್ಯೂಟರ್​ ಅಕೌಂಟಿಂಗ್​(ಟ್ಯಾಲಿ) ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ರುಡ್​ಸೆಟ್​ ಸಂಸ್ಥೆ ಅನೇಕ ಯುವಕ&ಯುವತಿಯರಿಗೆ ಮತ್ತು ಅವರ ಕುಟುಂಬಗಳಿಗೆ ಸ್ವಂತ ಕಾಲಿನಲ್ಲಿ ನಿಂತು ಬದುಕು ನಡೆಸಲು ಕಲಿಸಿದೆ. ಗ್ರಾಹಕರನ್ನು ಮೊದಲು ಆದರಿಸುವ ರೀತಿಯಲ್ಲಿ ವ್ಯವಹಾರದ ಅಭಿವೃದ್ಧಿ ಇರುತ್ತದೆ. ವ್ಯವಹಾರ ಅಭಿವೃದ್ಧಿಯಾಗಬೇಕಾದರೆ ಗ್ರಾಹಕರ ಜತೆ ಉತ್ತಮ ಬಾಂಧವ್ಯ ಇರಿಸಿಕೊಳ್ಳಬೇಕು. ವ್ಯವಹಾರದಲ್ಲಿ ಶಿಸ್ತು, ನಡೆ, ನುಡಿ ಇರಲಿ ಎಂದರು.

ರುಡ್​ಸೆಟ್​ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕ ಅಬ್ರಹಾಂ ಜೇಮ್ಸ್​ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್​ ವಂದಿಸಿದರು. ಶಿರಾರ್ಥಿಗಳಾದ ಶ್ರಾಮ್ಯ ರೈ ಮತ್ತು ಪ್ರಮೋದ ತರಬೇತಿಯ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net