

ಬೈಂದೂರು: ನಿವೃತ್ತರು ತಮ್ಮ ಗಳಿಕೆಯ ಸ್ವಲ್ಪ ಮೊತ್ತವನ್ನು ತಮ್ಮ ಮುಂದಿನ ಜೀವನೋಪಾಯಕ್ಕೆ ಮುಡುಪಾಗಿಡುವುದು ಅಗತ್ಯ ಎಂದು ಕುಂದಾಪುರ ರೋಟರಿ ಕ್ಲಬ್ ಹಿರಿಯ ಸದಸ್ಯ ಚಿತ್ತೂರು ಪ್ರಕಾಶ ಶೆಟ್ಟಿ ಹೇಳಿದರು.
ವತ್ತಿನಕಟ್ಟೆಯಲ್ಲಿ ಬೈಂದೂರು ತಾಲೂಕು ನಿವೃತ್ತ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.
ಆಧುನಿಕ ವೈದ್ಯಕೀಯ ಪದ್ದತಿಯಿಂದ ಮಾನವನ ಜೀವಿತಾವಧಿ ವೃದ್ಧಿಸುತ್ತಿದ್ದು, ವೃದ್ಧಾಪ್ಯದಲ್ಲಿ ನಮ್ಮ ಉಳಿತಾಯವೇ ನಮ್ಮ ಕೈಹಿಡಿಯಲಿದೆ. ಗಳಿಸಿದ ಹಣವನ್ನು ತನಗಾಗಿ ಮತ್ತು ತನ್ನವರಿಗಾಗಿ ಹೇಗೆ ಸದ್ವಿನಿಯೋಗಗೊಳಿಸಿಕೊಳ್ಳಬಹುದು ಎಂದರು.
ಸಂಘ ಅಧ್ಯಕ್ಷ ಐ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಂಜು ದೇವಾಡಿಗ ಕರ್ಯಕ್ರಮದ ಆತಿಥ್ಯದ ಪ್ರಾಯೋಜಕತ್ವ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ರಾಜಾರಾಮ ಭಟ್ ಇದ್ದರು. ಕಾರ್ಯದರ್ಶಿ ಗೋವಿಂದ ಬಿಲ್ಲವ ವರದಿ ವಾಚಿಸಿದರು. ಉಮೇಶ್ ರಾಯ್ಕರ್ ಪ್ರಾರ್ಥಿಸಿದರು. ಬಿ.ಭಾಸ್ಕರ್ ಪ್ರಭು ವಂದಿಸಿದರು.