

ಮೈಸೂರು: ಕರೊನಾ, ಒಮಿಕ್ರಾನ್ ಸೋಂಕಿನ ಭೀತಿ ನಡುವೆಯೂ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಕಾವೇರಿದ್ದು, ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಝಣಝಣ ಕಾಂಚಾಣ ಸದ್ದು ಮಾಡುತ್ತಿದ್ದು, ವಿಭಿನ್ನ ರೀತಿಯ ಆಮಿಷವೊಡ್ಡುತ್ತಿದ್ದಾರೆ. ಮೈಸೂರಲ್ಲಿ ಚುನಾವಣೆಗೆ ಇನ್ನು ಒಂದು ವಾರ ಇರುವಾಗಲೇ ಮತದಾರರಿಗೆ ಜೆಡಿಎಸ್ನಿಂದ ಬೆಳ್ಳಿ ಕಾಯಿನ್ ಹಂಚಿಕೆ ಮಾಡಲಾಗಿದೆ.
ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಚಿತ್ರವುಳ್ಳ ಬೆಳ್ಳಿ ಕಾಯಿನ್ಗಳನ್ನು ಮತದಾರರಿಗೆ ಕೊಟ್ಟು ಆಣೆ-ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆಯಂತೆ. ಬೆಳ್ಳಿ ಕಾಯಿನ್ ಮೇಲೆ 'ಓಂ ಶ್ರೀ ಮಂಜುನಾಥಾಯ ನಮಃ' ಎಂಬ ಅಕ್ಷರದ ಜತೆಗೆ ಶ್ರೀಮಂಜುನಾಥ ಸ್ವಾಮಿಯ ಚಿತ್ರ ಇದೆ. 'ದಿಗ್ವಿಜಯ ನ್ಯೂಸ್'ಗೆ ಬೆಳ್ಳಿ ಕಾಯಿನ್ ಫೋಟೋ ಲಭ್ಯವಾಗಿದೆ. . ಜೆಡಿಎಸ್ ಅಭ್ಯರ್ಥಿ ಹಲವೆಡೆ ಆಕ್ಷೇಪ ಶುರುವಾಗಿದೆ. ನಾಳೆ(ಶನಿವಾರ) ಎಚ್.ಡಿ.ಕುಮಾರಸ್ವಾಮಿ ಸಭೆಯಲ್ಲೂ ಬೆಳ್ಳಿ ಕಾಯಿನ್ ಹಂಚಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.