

ಬೆಂಗಳೂರು: ಮಳೆ ಹಾನಿ ಪ್ರದೇಶಗಳನ್ನು ಪರಿಶೀಲಿಸಲು ಗುರುವಾರ ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಟಿ ರೌಂಡ್ಸ್ ಮಾಡಿದರು. ಇದರ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಗಾಂಧಿನಗರ, ಶಿವಾಜಿನಗರ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆ ಸೃಷ್ಟಿಸಿದ ಅವಾಂತರ, ಹಾನಿಯನ್ನು ಪರಿಶೀಲಿಸುತ್ತಿದ್ದಾರೆ.
ಸಿಟಿ ರೌಡ್ಸ್ ಹೊರಟ ಸಿದ್ದರಾಮಯ್ಯಗೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷಾದ್, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಸಾಥ್, ಕೃಷ್ಣ ಭೈರೇಗೌಡ ಕೊಟ್ಟರು. ನಾಗವಾರದ ಎಲಿಮೆಂಟ್ ಮಾಲ್ ಬಳಿ ನೀರು ನುಗ್ಗಿರುವ ಸ್ಥಳ, ಬ್ಯಾಟರಾಯನಪುರ ಧರಣಿಸಂದ್ರದ ಫಾತಿಮಾ ಲೇಔಟ್ನ ರಾಜಕಾಲುವೆಯನ್ನ ಪರಿಶೀಲನೆ ನಡೆಸಿದರು. ಜನವರಿ, ಫೆಬ್ರವರಿ, ಮಾರ್ಚ್ನಲ್ಲಿ ರಾಜಕಾಲುವೆಗಳನ್ನು ಕ್ಲೀನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಸಲಹೆ ನೀಡಿದರು. ಬಳಿಕ ಶಿವಾಜಿನಗರದ ಬ್ರಾಡ್ ವೇ ರಸ್ತೆಯ ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದರು.