ಪಿಡಿಒಗಾಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ!

sambaragi gp
Published on

ಬೆಳಗಾವಿ: ಅಥಣಿ ತಾಲೂಕಿನ ಸಂಬರಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಿಡಿಒಗಾಗಿ ಗುರುವಾರ ಸತ್ಯನಾರಾಯಣ ಪೂಜೆ ಮಾಡಲಾಯಿತು. ಪಿಡಿಒ ಶ್ರೀಶೈಲ ಸನದಿ ಸೇರಿದಂತೆ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರು ಒಟ್ಟಾಗಿ ಪೂಜೆ ನೆರವೇರಿಸಿದರು.

ಸಂಬರಗಿ ಗ್ರಾಮ ಪಂಚಾಯಿತಿ 3 ಗ್ರಾಮಗಳನ್ನು ಹೊಂದಿದ್ದು, ಇಲ್ಲಿಗೆ ಪಿಡಿಒ ಆಗಿ ಬರುವ ಯಾವ ಅಧಿಕಾರಿಯೂ 6 ತಿಂಗಳಿಗಿಂತ ಹೆಚ್ಚು ಕಾಲ ಕರ್ತವ್ಯದಲ್ಲಿ ಉಳಿಯುವುದಿಲ್ಲ. ಅಲ್ಲದೆ, ಇಲ್ಲಿಗೆ ಬರುವ ಪಿಡಿಒಗಳು ಆರಂಭದ ಆರು ತಿಂಗಳು ಒಳ್ಳೆಯ ಕೆಲಸ ಮಾಡುತ್ತಾರೆ. ಆ ಬಳಿಕ ವರ್ಗಾವಣೆಗೆ ಆಗ್ರಹಿಸಿ ತಾವೇ ಮೇಲಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಇದರಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ.

ಇದೇ ಕಾರಣಕ್ಕೆ ರೋಸಿಹೋದ ಗ್ರಾಪಂ ಸದಸ್ಯರು ಮತ್ತು ಅಧ್ಯಕ್ಷರು ಗ್ರಾಪಂ ಪಿಡಿಒ ವರ್ಗವಾಗದಿರಲಿ, ಚುನಾಯಿತ ಪ್ರತಿನಿಧಿಗಳಿಗಳಲ್ಲಿ ಒಗ್ಗಟ್ಟಿರಲಿ, ಊರಿಗೆ ಯಾವುದೇ ಸಮಸ್ಯೆ ಬಾರದಿರಲಿ. ದೇವರು ಈ ಸಂಕಷ್ಟದಿಂದ ಗ್ರಾಮವನ್ನು ಪಾರು ಮಾಡಲಿ ಎಂದು ಪ್ರಾರ್ಥಿಸಿ ಸತ್ಯನಾರಾಯಣ ಪೂಜೆ ಮಾಡಿದ್ದೇವೆ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ. ಪೂಜೆ ಬಳಿಕ ಎಲ್ಲರೂ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net