ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಮೋಹನ್‌ ಭಾಗವತ್ ಭೇಟಿ, ದಲಿತ-ಹಿಂದುಳಿದ ಮಠಾಧೀಶರ ಜತೆ ಚರ್ಚೆ

mohan bhagavat
Published on

ಚಿತ್ರದುರ್ಗ: ಶಿವಶರಣ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್‌ ಭಾಗವತ್ ಅವರು ದಲಿತ ಮತ್ತು ಹಿಂದುಳಿದ ಮಠಾಧೀಶರ ಜತೆ ಮಂಗಳವಾರ ಸಂವಾದ ನಡೆಸಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ನೇತೃತ್ವದಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ. ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಕುಂಚಿಟಿಗ ಪೀಠದ ಶಾಂತವೀರ ಶ್ರೀ, ಭಗೀರಥ ಮಠದ ಪುರುಷೋತ್ತಮಾನಂದ ಶ್ರೀಗಳು, ಹಡಪದ ಅಪ್ಪಣ್ಣ ಶ್ರೀಗಳು, ಈಡಿಗ ಮಠದ ರೇಣುಕಾನಂದ ಶ್ರೀಗಳು, ಶ್ರೀಕೃಷ್ಣ ಯಾದವ ಮಠದ ಯಾದವಾನಂದ ಶ್ರೀಗಳು, ಕುಂಬಾರ ಗುಂಡಯ್ಯ ಶ್ರೀಗಳು, ಚಲವಾದಿ ಮಠದ ಬಸವ ನಾಗಿದೇವ ಶ್ರೀಗಳು, ಹರಳಯ್ಯ ಶ್ರೀಗಳು, ಸೇವಾಲಾಲ್ ಶ್ರೀಗಳು ಸೇರಿ 20ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.

ಸೋಮವಾರ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ದರ್ಶನ ಪಡೆದ ಪಡೆದ ಮೋಹನ್​ ಭಾಗವತ್​ ಅವರು ಅಲ್ಲೇ ವಾಸ್ತವ್ಯವಿದ್ದರು. ಮಂಗಳವಾರ ಬೆಳಗ್ಗೆ ಹಿಂದುಳಿದ ಮತ್ತು ದಲಿತ ಮಠಾಧೀಶರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಮಾಧ್ಯಮ ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net