ಕುಖ್ಯಾತ ರೌಡಿ ಕೋಳಿ ಫಯಾಜ್ ಪುತ್ರ ಅಮೀರ್ ಖಾನ್ ಗಡಿಪಾರು

crime
Published on

ಬೆಂಗಳೂರು: ಕುಖ್ಯಾತ ರೌಡಿ ಕೋಳಿ ಫಯಾಜ್ ಪುತ್ರನನ್ನು ಬರೋಬ್ಬರಿ ಒಂದು ವರ್ಷ ಕಾಲ ಬೆಂಗಳೂರು ನಗರದಿಂದ ಗಡಿಪಾರು ಮಾಡಲಾಗಿದೆ.

ಕಮರ್ಷಿಯಲ್ ಸ್ಟ್ರೀಟ್ ಠಾಣೆ ಶಿವಾಜಿನಗರದ ಕುಖ್ಯಾತ ರೌಡಿ ಅಮೀರ್ ಖಾನ್ ಅಲಿಯಾಸ್ ಪಪ್ಪು (36) ಗಡಿಪಾರಾದವ. ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಈತನನ್ನು 2022ರ ಅ.10ರವರೆಗೆ ಗಡಿಪಾರು ಮಾಡಿ ಪೂರ್ವ ವಿಭಾಗದ ಪೊಲೀಸ್ ಉಪ ಆಯುಕ್ತರು ಆದೇಶಿಸಿದ್ದಾರೆ.

ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಅಪಹರಣ, ಕಳವು, ಪ್ರಾಣ ಬೆದರಿಕೆ ಹಾಗೂ ಮಾದಕ ವಸ್ತು ಮಾರಾಟ ಸೇರಿ 22 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ರೌಡಿ ಅಮೀರ್​ ಆಖನ್​ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರಿಸಿದ್ದ. ಸಾರ್ವಜನಿಕ ಸ್ಥಳಗಲ್ಲಿ ಗೂಂಡಾ ವರ್ತನೆ ತೋರುವ ಮೂಲಕ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net