ಕ್ಲೋಸ್ ಡೋರ್​ ಮೀಟಿಂಗ್​ನಲ್ಲಿ ರೋಹಿಣಿ ಸಿಂಧೂರಿಗೆ ಹಿಗ್ಗಾಮುಗ್ಗಾ ತರಾಟೆ! ಮೌನವಾಗಿಯೇ ಹೊರಟ ಡಿಸಿ

Rohini Sindhuri
Published on

ಮೈಸೂರು: ನಿಮ್ಮ ಒಣ ಪ್ರತಿಷ್ಠೆಗೆ ಜನರನ್ನು ಏಕೆ ಸಾಯಿಸ್ತೀರಿ? ಜಿಲ್ಲಾಧಿಕಾರಿ ಆದ ಮಾತ್ರಕ್ಕೆ ನಿಮಗೇನು ಕೋಡು ಇರಲ್ಲ. ಜನರ ಸೇವೆ ಮಾಡಲು ಬಂದಿದ್ದೀರಿ? ಜನಪ್ರತಿನಿಧಿಗಳ ಬಳಿ ಹೇಳಿಸಿಕೊಳ್ಳದಂತೆ ಕೆಲಸ ಮಾಡಿಕೊಂಡು ಹೋಗಿ... ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜನಪ್ರತಿನಿಧಿಗಳು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಶನಿವಾರ ನಡೆದ ಕ್ಲೋಸ್ ಡೋರ್ ಮೀಟಿಂಗ್‌ನಲ್ಲಿ ಶಾಸಕರಾದ ಸಾ.ರಾ.ಮಹೇಶ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್‌.ಪಿ.ಮಂಜುನಾಥ್, ಸಂಸದ ಪ್ರತಾಪ್ ಸಿಂಹ ಅವರು ರೋಹಿಣಿ ಸಿಂಧೂರಿ ವಿರುದ್ಧ ಯದ್ವಾತದ್ವಾ ವಾಗ್ದಾಳಿ ನಡೆಸಿದರು. ಇದನ್ನೂ ಓದಿರಿ ಕರೊನಾಗೆ ಒಂದೇ ದಿನ ತಾಯಿ-ಮಗ ಬಲಿ! ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಸಂಸ್ಕಾರ

ದಿನಪೂರ್ತಿ ಮೀಟಿಂಗ್ ಮಾಡಿದ್ರೆ ಕೆಲಸ ಆಗಲ್ಲ. ಜನರ ಕಷ್ಟ ಏನು ಅಂತ ಹಳ್ಳಿಗಳಿಗೆ ಹೋಗಿ ನೋಡಿ ಎಂದು ಶಾಸಕರು ನಿರಂತರವಾಗಿ ವಾಗ್ದಾಳಿ ನಡೆಸಿದರು. ಶಾಸಕರ ಆಪಾದನೆಗಳಿಗೆ ವಿವರಣೆ ನೀಡುವಂತೆ ಪ್ರತಾಪ್ ಸಿಂಹ ಪಟ್ಟು ಹಿಡಿದರು. ತಿ.ನರಸೀಪುರ ಸೇರಿದಂತೆ ತಾಲೂಕು ಕೇಂದ್ರಗಳಿಗೆ ಹೋಗಿ ಬಂದಿದ್ದೇನೆ ಎಂದಷ್ಟೇ ರೋಹಿಣಿ ಸಿಂಧೂರಿ ಹೇಳಿದರು. ಇದನ್ನೂ ಓದಿರಿ ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಇಡೀ ಸಭೆಯಲ್ಲಿ ಜಿಲ್ಲಾಧಿಕಾರಿ ಪರ ಮಾತನಾಡಿದು ಶಾಸಕ ಜಿ.ಟಿ.ದೇವೇಗೌಡ ಮಾತ್ರ. ಏನೂ ಮಾತನಾಡದೆ ಮೌನವಾಗಿದ್ದ ರೋಹಿಣಿ ಸಿಂಧೂರಿ, ಸಭೆ ಮುಗಿದ ಬಳಿಕ‌ ಮಾಧ್ಯಮ ಪ್ರತಿನಿಧಿಗಳಿಗೂ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net