

ಮುಳ್ಳೇರಿಯ: ರಾಜ್ಯದ ಶಾಲೆಗಳಲ್ಲಿ ಪರಿಣಾಮಕಾರಿ ಮತ್ತು ಕಠಿಣ ಶೈಕ್ಷಣಿಕ ಚಟುವಟಿಕೆಗಳು, ಪರೀಕ್ಷೆಗಳು ಮತ್ತು ಮೌಲ್ಯಮಾಪನ ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಕನಿಷ್ಠ ವಿಷಯ ಯೋಜನೆಯನ್ನು ಈ ವರ್ಷ ಪ್ರಾರಂಭಿಸಲಾಗುವುದು ಎಂದು ಉದ್ಯೋಗ ಮತ್ತು ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ತಿಳಿಸಿದರು.
ಕಾನತ್ತೂರು ಸರ್ಕಾರಿ ಯುಪಿ ಶಾಲೆಯಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದರು. ಮುಳಿಯಾರ್ ಗ್ರಾಪಂ ಉಪಾಧ್ಯಕ್ಷ ಎ.ಜನಾರ್ದನನ್, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಕೀಲೆ ಎಸ್.ಎನ್.ಸರಿತಾ, ಮುಳಿಯಾರ್ ಗ್ರಾಪಂ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಇ.ಮೋಹನನ್, ಲೋಕೋಪಯೋಗಿ ಇಲಾಖೆ ಎಇ ಅನೀಸಾ ಮನ್ಸೂರ್ ಮಲ್ಲ, ಎಂ.ಪಿ. ಸಜಿತ್, ಶಿಕ್ಷಣ ಉಪ ನಿರ್ದೇಶಕ ಟಿ.ವಿ.ಮಧುಸೂದನನ್, ಕಾಸರಗೋಡು ಎಇಒ ಆಗಸ್ಟೀನ್ ಬರ್ನಾರ್ಡ್ ಮೊಂತೆರೊ, ಪ್ರಮುಖರಾದ ಅಶೋಕನ್ ಮಾಸ್ತರ್, ಪ್ರಭಾಕರನ್ ಚೆಟ್ಟತ್ತೋಡು, ಪಿಟಿಎ ಅಧ್ಯಕ್ಷ ಕೆ.ಪಿ.ಪವಿತ್ರನ್, ಎಸ್ಎಂಸಿ ಅಧ್ಯಕ್ಷ ಕೆ.ಪಿ.ಪ್ರಸನ್ನನ್, ಎಂಪಿಟಿಎ ಅಧ್ಯಕ್ಷೆ ರಮ್ಯಾ ಪಯೋಲಂ, ಪ್ರಶಾಂತ್ ಮಾಸ್ತರ್ ಮಾತನಾಡಿದರು. ಮುಳಿಯಾರ್ ಗ್ರಾಪಂ ಅಧ್ಯಕ್ಷೆ ಪಿ.ವಿ.ಮಿನಿ ಸ್ವಾಗತಿಸಿದರು. ಮುಖ್ಯಶಿಕ್ಷಕಿ ವಿ.ಎಂ.ಕೃಷ್ಣಪ್ರಸಾದ್ ವಂದಿಸಿದರು.