ಸಾಧಕರನ್ನು ಗುರುತಿಸುವುದು ಸಾಧನೆಗೆ ಪ್ರೇರಣೆ: ಗಣೇಶ್ ಕೈಕುರೆ ಅಭಿಪ್ರಾಯ

Kdb_achievement
Published on

ಕಡಬ: ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಗೌರವಿಸಲ್ಪಡಲು ಯೋಗ್ಯ. ಸಾಧಕರನ್ನು ಗುರುತಿಸುವುದು ಇತರರ ಸಾಧನೆಗೆ ಪ್ರೇರಣೆಯಾಗಲಿದೆ ಎಂದು ಜೆಸಿಐ ಕಡಬ ಕದಂಬದ ಪೂರ್ವಾಧ್ಯಕ್ಷ, ಪುತ್ತೂರು ತಾಪಂ ಮಾಜಿ ಸದಸ್ಯ ಗಣೇಶ್ ಕೈಕುರೆ ಹೇಳಿದರು.

ಜೆಸಿಐ ಕಡಬ ಕದಂಬ ಘಟಕ ಆಶ್ರಯದಲ್ಲಿ ಜೆಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್‌ನ ಸಹಯೋಗದೊಂದಿಗೆ ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಡಿ ಆಯೋಜಿಸಲಾಗಿದ್ದ ತೆರೆಮರೆಯ ಸಾಧಕರಿಗೆ ಸನ್ಮ್ಮಾನ ನೆರವೇರಿಸಿ ಮಾತನಾಡಿದರು.

ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ಸಂಯೋಜಕ ಪುತ್ತೂರಿನ ದಾಮೋದರ ಪಾಟಾಳಿ ಮುಖ್ಯ ಅತಿಥಿಯಾಗಿದ್ದರು. ಜೆಸಿಐ ಕಡಬ ಕದಂಬ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ನಾಗರಾಜ್ ಎನ್.ಕೆ. ಶುಭಹಾರೈಸಿದರು. ಜೇಸಿ ಘಟಕಾಧ್ಯಕ್ಷೆ ವಿಶ್ರುತಾ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.

ಜೇಸಿ ವಲಯ ನಿರ್ದೇಶಕ ಕಾಶೀನಾಥ ಗೋಗಟೆ, ನಿಕಟಪೂರ್ವಾಧ್ಯಕ್ಷ ಜಾಫಿರ್ ಮಹಮ್ಮದ್, ಕಾರ್ಯಕ್ರಮ ನಿರ್ದೇಶಕ ಅನೀಶ್ ಲೋಬೊ, ಅಬ್ದುಲ್ ರಹಿಮಾನ್ ಮುಂತಾದವರು ಉಪಸ್ಥಿತರಿದ್ದರು. ಜೇಸಿ ಸದಸ್ಯ ಹರೀಶ್ ಮೈಲೇರಿ ಸ್ವಾಗತಿಸಿ, ಕಾರ್ಯದರ್ಶಿ ನವ್ಯಾಕೃಷ್ಣ ವಂದಿಸಿದರು.

ಸನ್ಮಾನ, ಅಭಿನಂದನೆ

ಅಡಿಕೆ, ತೆಂಗಿನಕಾಯಿ ಕೊಯ್ಲು ಹಾಗೂ ಮದ್ದು ಸಿಂಪಡಣೆ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಅನುಭವಿ ಕಡಬ ಮೇದಪ್ಪ ಗೌಡ ಹಾಗೂ ಹೊಸಮಠ ಕೃಷ್ಣಪ್ಪ ರಾಣ್ಯ ಅವರನ್ನು ಸನ್ಮಾನಿಸಲಾಯಿತು. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಚುನಾಯಿತರಾದ ಜೇಸಿ ಘಟಕದ ಪೂರ್ವಾಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಅವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net