ಕಲಾತ್ಮಕ ಸಹಿಯ ಶಾಂತಯ್ಯ ಇನ್ನಿಲ್ಲ: ಸಾವಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಉಪನೋಂದಣಾಧಿಕಾರಿ

shantaiah
Published on

ದಾಬಸ್​ಪೇಟೆ(ನೆಲಮಂಗಲ): ಕಲಾತ್ಮಕವಾಗಿ ಸಹಿ ಹಾಕುವ ಮೂಲಕ ಪ್ರಸಿದ್ಧಿ ಪಡೆದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದ ನಿವಾಸಿ, ನಿವೃತ್ತ ಉಪನೋಂದಣಾಧಿಕಾರಿ ಶಾಂತಯ್ಯ (61) ಅವರು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣುಗಳನ್ನು ದಾನ ಮಾಡಿ ಹಲವರ ಬದುಕಿಗೆ ಬೆಳಕು ನೀಡಿದ್ದಾರೆ.

ಉತ್ತರಕನ್ನಡದ ಹೊನ್ನಾವರದಲ್ಲಿ ಉಪನೋಂದಣಾಧಿಕಾರಿ ಆಗಿದ್ದ ಶಾಂತಯ್ಯ, ವರ್ಷದ ಹಿಂದೆ ನಿವೃತ್ತರಾಗಿದ್ದರು. ಯಾರೂ ನಕಲು ಮಾಡಲಾಗದಂತೆ ಹಾಗೂ ಕಲಾತ್ಮಕವಾಗಿ ಸಹಿ ಹಾಕುತ್ತಿದ್ದ ಅವರು ಸಹಿ ಮಾಡಲು ಒಂದು ನಿಮಿಷ ಸಮಯ ತೆಗೆದುಕೊಳ್ಳುತ್ತಿದ್ದರು. ಅವರ ಸಹಿಯ ಶೈಲಿಯನ್ನು ಮೆಚ್ಚಿದ ಹೈಕೋರ್ಟ್​ ನ್ಯಾಯಾಧೀಶರೊಬ್ಬರು ಅವರನ್ನು ಗೌರವಿಸಿದ್ದರು.

ಶಾಂತಯ್ಯ ಅವರ ಸಹಿ
ಶಾಂತಯ್ಯ ಅವರ ಸಹಿ

ಅನಾರೋಗ್ಯದಿಂದ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಶಾಂತಯ್ಯ ನಿಧನರಾದರು. ಸ್ವಗ್ರಾಮದಲ್ಲಿ ಗುರುವಾರ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿತು. ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಶಾಂತಯ್ಯ ಸಾರ್ಥಕತೆ ಮೆರೆದಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net