

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಆಡಳಿತಾತ್ಮಕ ಸದಸ್ಯರಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ರಾಷ್ಟ್ರಪತಿಗಳ ಆದೇಶಾನುಸಾರ ರಾಘವೇಂದ್ರ ಔರಾದ್ಕರ್ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಹಾಗೂ ಪಿಂಚಣಿ ಸಚಿವಾಲಯ ಶುಕ್ರವಾರ ಆದೇಶಿಸಿದೆ. ಅಧಿಕಾರ ಸ್ವೀಕರಿಸಿದ ದಿನದಿಂದ 4 ವರ್ಷದವರೆಗೆ ಅಥವಾ 67 ವರ್ಷ ತುಂಬುವವರೆಗೆ ಈ ಎರಡರಲ್ಲಿ ಮೊದಲು ಯಾವುದು ಮೊದಲು ಬರುತ್ತೋ ಅಲ್ಲಿಯವರೆಗೆ ರಾಘವೇಂದ್ರ ಔರಾದ್ಕರ್ ಅವರ ಅಧಿಕಾರಾವಧಿ ಇರಲಿದೆ.