ಬೆಳ್ಳಂಬೆಳಗ್ಗೆ BMTC ಬಸ್ ಡಿಕ್ಕಿ, ಬೈಕ್​ ಸವಾರ ಸ್ಥಳದಲ್ಲೇ ಸಾವು

BMTC BUS ACCIDENT
ಸಾಂದರ್ಭಿಕ ಚಿತ್ರ
Published on

ಆನೇಕಲ್​: ಬಿಎಂಟಿಸಿ ಬಸ್ ಮತ್ತು ಬೈಕ್ ನಡುವೆ ಇಂದು ಬೆಳ್ಳಂಬೆಳಗ್ಗೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್​ ಸವಾರ ಮೃತಪಟ್ಟ ಘಟನೆ ಬನ್ನೇರುಘಟ್ಟ ಮುಖ್ಯರಸ್ತೆಯ ಆನಂದ್ ಸಭಾ ಕಲ್ಯಾಣ ಮಂಟಪದ ಬಳಿ ಸಂಭವಿಸಿದೆ.

ಉತ್ತರಹಳ್ಳಿಯ ಯಾದಲ್ ನಗರದ ನಿವಾಸಿ ಗುಣಶಂಕರ್ ಮೃತ ದುರ್ದೈವಿ. ಬನ್ನೇರುಘಟ್ಟದಿಂದ- ಬೆಂಗಳೂರು ಕಡೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್, ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಬೈಕ್​ ಸವಾರನ ಮೇಲೆ ಬಸ್​ನ ಚಕ್ರ ಹರಿದಿದೆ. ತಲೆಯ ಕೆಲ ಭಾಗ ಛಿದ್ರವಾಗಿದ್ದು ಸ್ಥಳದಲ್ಲೇ ದುರಂತ ಅಂತ್ಯಕಂಡಿದ್ದಾನೆ. ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net