ಮನಸ್ಸಿನ ನಿಗ್ರಹಕ್ಕೆ ಧಾರ್ಮಿಕ ಕಾರ್ಯಕ್ರಮ ಬೇಕು

oplus_2
oplus_2
Published on

ರಾಮದುರ್ಗ: ಶರವೇಗದಲ್ಲಿ ಸಂಚರಿಸಬಲ್ಲ ಶಕ್ತಿ ಹೊಂದಿರುವ ಮನಸ್ಸಿನ ನಿಗ್ರಹಕ್ಕಾಗಿ ಭಗವಂತನ ಅನುಗ್ರಹ ಅಗತ್ಯ. ಯುವಪೀಳಿಗೆ ಮನಸ್ಸು ಪರಿಶುದ್ಧವಾಗಿಟ್ಟುಕೊಳ್ಳುವಂತೆ ಮಾಡಲು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಅವಶ್ಯ ಎಂದು ಗುಳೇದಗುಡ್ಡ ಗುರುಸಿದ್ಧೇಶ್ವರ ಬೃಹನ್ಮಠದ ಜಗದ್ಗುರು ಗುರುಸಿದ್ದಪ್ಪ ಪಟ್ಟದಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ನೇಕಾರ ಪೇಟೆಯ ಬನಶಂಕರಿದೇವಿ ಶತಮಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ನಿಖರ ಗುರಿ ಸಾಧನೆಗೆ ಸತತ ಪ್ರಯತ್ನ ಬೇಕು. ಅದಕ್ಕಾಗಿ ಮನಸ್ಸನ್ನು ಗಟ್ಟಿಯಾಗಿ ಇಟ್ಟುಕೊಂಡಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು.

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿ, ಸತತ 9 ದಿನ ಜಾತ್ರೆಯನ್ನು ವಿಜಂಭಣೆಯಿಂದ ಆಚರಿಸುತ್ತಿರುವುದು ನೇಕಾರ ಸಮುದಾಯದ ಧಾರ್ಮಿಕ ಮನೋಭಾವವು ಶ್ಲಾಘನೀಯ ಎಂದರು.

ನೇಕಾರ ಸಮುದಾಯಗಳ ಒಕ್ಕೂಟ ಜಿಲ್ಲಾಧ್ಯಕ್ಷ ಗಜಾನನ ಗುಂಜೇರಿ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಕುರುಡಗಿ, ರಾಜ್ಯ ದೇವಾಂಗ ಸಂಘದ ಕಾರ್ಯದರ್ಶಿ ಟಿ. ರಾಜೇಶ ಮಾತನಾಡಿದರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸೂರ್ಯಪ್ರಕಾಶ ತಂಡದಿಂದ ವಿಶೇಷ ನತ್ಯ, ಹುಬ್ಬಳ್ಳಿ ಸಂಜು ಜಾದುಗಾರ ಅವರಿಂದ ಜಾದು ಪ್ರದರ್ಶನ, ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಹಾಸ್ಯ ಕಾರ್ಯಕ್ರಮ ಹಾಗೂ ಗದುಗಿನ ವೆಂಕಟೇಶ ವೆಂಕಟಾಪುರ ಸಾಂಸ್ಕ್ರತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು. ಸಮುದಾಯದ ಅಧ್ಯಕ್ಷ ನಾರಾಯಣಪ್ಪ ಬೆನ್ನೂರ, ನ್ಯಾಯಾಧೀಶ ರವೀಂದ್ರ ಆರಿ, ದುರ್ವಾಸಪ್ಪ ಹೆಬ್ಬಳ್ಳಿ, ಕುಬೇರ ಗರಡಿಮನಿ, ನಾರಾಯಣ ಹೂಲಿ, ಶಿವಾನಂದ ಸೂಳಿಬಾವಿ, ಐ.ಜಿ. ರಾಮದುರ್ಗ, ಕಲಾವಿದ ಸಿದ್ಧು ಮೋಟೆ, ವಿಠ್ಠಲ ಕೊಳ್ಳಿ, ವಿನೋದ ಕರದಿನ, ಮುದಕವಿ ಪಿಕೆಪಿಎಸ್ ಅಧ್ಯಕ್ಷ ಸುರೇಶ ರಕ್ಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net