

ಬೆಂಗಳೂರು: ಗ್ರಾಹಕರು ಹಾಗೂ ರಿಯಾಲ್ಟಿ ಕಂಪನಿಗಳ ನಡುವೆ ಸೇತುವೆಯಾಗಿ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್ ಚಾನೆಲ್ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರದಿಂದ (ಏ.8) ಭಾನುವಾರದವರೆಗೆ (ಏ.10) "ರಿಯಲ್ಎಸ್ಟೇಟ್ ಎಕ್ಸ್ಪೋ'' ಆಯೋಜಿಸಿದೆ.
ಅಶ್ವಸೂರ್ಯ ರಿಯಾಲಿಟಿಸ್ ಅರ್ಪಿಸುವ ಈ ಎಕ್ಸ್ಪೋದಲ್ಲಿ ರಾಜ್ಯದ ಪ್ರಮುಖ ರಿಯಾಲ್ಟಿ ಕಂಪನಿಗಳಾದ ಪ್ರಾವಿಡೆಂಡ್, ಎಸ್ಆರ್ಎಸ್ ಪ್ರಮೋಟರ್ಸ್, ಅಥರ್ವ ಗ್ರೂಪ್ಸ್, ಡಿಎಸ್ ಮ್ಯಾಕ್ಸ್, ಕೆಎನ್ಎಸ್ ಇನ್ಫ್ರಾ, ಕಲ್ಯಾಣ್ ಶೆಲ್ಟರ್ಸ್, ಗುರು ಪುನ್ವಾನಿ, ಆರ್ಯನ್ ಡೆವಲಪರ್ಸ್ ಮತ್ತು ಪ್ರಮೋಟರ್ಸ್, ಶರಣ್ಯ ಫಾರ್ಮ್ಸ್, ಎಂ.ಆರ್. ಪ್ರಾಪರ್ಟೀಸ್, ಆಶೀರ್ವಾದ್ ಪ್ರಾಪರ್ಟೀಸ್, ಅಲೈಡ್ ಹ್ಯಾಬಿಟ್ಯಾಟ್ಸ್, ಕರ್ನಾಟಕ ಗೃಹ ಮಂಡಳಿ, ಓಂ ಶ್ರೀ ಇನ್ಫ್ರಾಸ್ಟ್ರಕ್ಚರ್, ಎ4 ಪ್ರಾಪಟೀರ್ಸ್, ಭಗಿನಿ ಡೆವಲಪರ್ಸ್, ಎಂಎಚ್ ಪ್ರಮೋಟರ್ಸ್, ಎಂಡಿಎಸ್, ಗೃಹಮಿತ್ರ ಡೆವಲಪರ್ಸ್, ಪಿ.ಸಿ. ರಿಯಾಲ್ಟಿ, ಮಥರ್ ಅರ್ಥ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಮತ್ತು ಎಟಿಝಡ್ ಪ್ರಾಪಟೀರ್ಸ್ ಸೇರಿ ವಿವಿಧ ರಿಯಾಲ್ಟಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿ ನಿವೇಶನ, ಅಪಾರ್ಟ್ಮೆಂಟ್ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಲಿವೆ.
ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಆರ್ಇಪಿಸಿಒ ಹೋಮ್ ಫೈನಾನ್ಸ್ ಹಣಕಾಸು ನೆರವು ಒದಗಿಸಲಿವೆ. ಪೀಠೋಪಕರಣ ಉದ್ಯಮ, ಕಬ್ಬಿಣ ಹಾಗೂ ಸಿಮೆಂಟ್ ಕಂಪನಿಗಳು, ಮನೆಯ ಹೊರಾಂಗಣ ಹಾಗೂ ಒಳಾಂಗಣ ವಿನ್ಯಾಸ ತಜ್ಞರು, ಕಟ್ಟಡ ಸಾಮಗ್ರಿ ವಿತರಕರು ಕೂಡ ಪಾಲ್ಗೊಳ್ಳಲಿದ್ದಾರೆ.
ಉಚಿತ ಪ್ರವೇಶ, ಪಾರ್ಕಿಂಗ್ ವ್ಯವಸ್ಥೆ: ಕಾಲೇಜು ಮೈದಾನದಲ್ಲಿ ರಿಯಾಲ್ಟಿ ಮೇಳಕ್ಕೆ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. ಸಂಪೂರ್ಣ ಹವಾ ನಿಯಂತ್ರಿತ ಸೌಲಭ್ಯವಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಸ್ವಾಗತ ಕಮಾನು ನಿರ್ಮಿಸಲಾಗಿದೆ. ಸ್ಟಾಲ್ಗಳ ಪ್ರವೇಶದಲ್ಲಿ ಸುಂದರವಾದ ಕಟೌಟ್ ನಿರ್ಮಾಣವಾಗಿದೆ. ಎಲ್ಲ ಸ್ಟಾಲ್ಗಳಿಗೆ ವಿದ್ಯುತ್ ಒದಗಿಸಲಾಗಿದೆ. ಎಕ್ಸ್ಪೋಗೆ ಉಚಿತ ಪ್ರವೇಶ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರು ಸೇರಿ ಇತರೆ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೇ ಸೂರಿನಡಿ ಗ್ರಾಹಕರು ರಿಯಾಲ್ಟಿ ಕ್ಷೇತ್ರದ ವಿವಿಧ ಕಂಪನಿಗಳ ನಿವೇಶನ, ಅಪಾರ್ಟ್ಮೆಂಟ್, ವಿಲ್ಲಾ, ಫಾರ್ಮ್ ಹೌಸ್ ಹಾಗೂ ಫಾರಂಪ್ಲಾಟ್ ಯೋಜನೆಗಳ ಮಾಹಿತಿ ಪಡೆಯಬಹುದು. 3 ದಿನ ನಡೆಯುವ ಮೇಳದಲ್ಲಿ 20-25 ಸಾವಿರ ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕನಸು ನನಸಾಗಿಸಿಕೊಳ್ಳಿ: ಜೀವನದಲ್ಲಿ ಸ್ವಂತ ಮನೆ ಹೊಂದಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಕೋವಿಡ್ ಬಳಿಕ ಮನೆಯ ಮಹತ್ವ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಆಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ಸಿಟಿ ಸುತ್ತಮುತ್ತ ಕೈಗೆಟಕುವ ದರದಲ್ಲಿ ನಿವೇಶನ, ವಿಲ್ಲಾ, ಫ್ಲ್ಯಾಟ್ ಹಾಗೂ ಫಾರ್ಮ್ಹೌಸ್ಗಳನ್ನು ಖರೀದಿಸಿ ತಮ್ಮ ಕನಸುಗಳನ್ನು ನನಸಾಗಿಸುವ ಸುವರ್ಣಾವಕಾಶ ಇದಾಗಿದೆ. ಬಿಡಿಎ ಹಾಗೂ ಬಿಎಂಆರ್ಡಿಎ ಸೈಟ್ಗಳು ಲಭ್ಯವಿದೆ. ಆಕರ್ಷಕ ಕೊಡುಗೆಗಳು ಸಿಗಲಿವೆ. ಸಾರ್ವಜನಿಕರು ಇಂತಹ ಒಳ್ಳೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.