ಬ್ಲಡಿ ಫೆಲೋಸ್, ಹೇಳೋರಿಲ್ಲ ಕೇಳೋರಿಲ್ವಾ? ಇವರನ್ನೆಲ್ಲ ಸಸ್ಪೆಂಡ್ ಮಾಡಿ ಮನೆಗೆ ಕಳಿಸಿ: ಮಾಧುಸ್ವಾಮಿ

Sudhee_27_Madhuswamy_PM_@_VS (3)
Published on

ತುಮಕೂರು: ಬ್ಲಡಿ ಫೆಲೋಸ್.. ಹೇಳೋರಿಲ್ಲ ಕೇಳೋರಿಲ್ವಾ? ಇವರನ್ನೆಲ್ಲ ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ... ಇದು ಆರ್​ಡಿಪಿಆರ್ ಇಂಜಿನಿಯರ್​ಗಳಿಗೆ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡ ಪರಿ.

ಜಿಪಂ ಕಚೇರಿಯಲ್ಲಿ ಮಂಗಳವಾರ ಕೆಡಿಪಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಶಾಲಾ ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ ವಿಳಂಬ ಆಗಿರುವ ಬಗ್ಗೆ ಗರಂ ಆದ ಮಾಧುಸ್ವಾಮಿ, ನಾನು ನಿನ್ನೆಯ ಕೆಲಸ ಕೇಳ್ತಿಲ್ಲ. 3 ವರ್ಷದ ಹಿಂದಿನ ಕೆಲಸ ಕೇಳ್ತಿದ್ದೀನಿ. 3 ವರ್ಷವಾದ್ರೂ ಕೆಲಸವಾಗಿಲ್ಲ ಅಂದ್ರೆ ಏನು? 2019-20ರ ಕಾಮಗಾರಿಗಳೇ ಮುಗಿದಿಲ್ಲವೆಂದರೆ ಏನರ್ಥ? ಎಂದು ಆರ್​ಡಿಪಿಆರ್ ಇಂಜಿನಿಯರ್​ಗಳ ವಿರುದ್ಧ ಗರಂ ಆದರು.

ಇವರನ್ನೆಲ್ಲ ಸಸ್ಪೆಂಡ್ ಮಾಡಿ ಮನೆಗೆ ಕಳುಹಿಸಿ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿಗೆ ಸಚಿವ ಮಾಧುಸ್ವಾಮಿ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net