ತಾಯಿ-ಮಗುವಿನ ಮೇಲೆ ಹರಿದ ಸಾರಿಗೆ ಬಸ್​!​ ಸ್ಥಳದಲ್ಲೇ ಇಬ್ಬರ ಸಾವು, ಬೆಚ್ಚಿಬಿದ್ದ ಪ್ರಯಾಣಿಕರು

accident
Published on

ಉಪ್ಪಿನಂಗಡಿ: ಸಾರಿಗೆ ಬಸ್​ ನಿಲ್ದಾಣದ ದ್ವಾರದಲ್ಲಿ ನಿಂತಿದ್ದ ತಾಯಿ-ಮಗುವಿನ ಮೇಲೆ ಬಸ್​ ಹರಿದಿದ್ದು, ಇಬ್ಬರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ಉಪ್ಪಿನಂಗಡಿ ಬಸ್​ ನಿಲ್ದಾಣದಲ್ಲಿ ಸಂಭವಿಸಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಸಿದ್ದೀಕ್ ಎಂಬುವರ ಪತ್ನಿ ಶಾಹಿದಾ(25) ಮತ್ತು ಇವರ ಒಂದು ವರ್ಷದ ಪುತ್ರ ಶಾಹೀಲ್ ಮೃತ ದುರ್ದೈವಿಗಳು. ಗೇರುಕಟ್ಟೆಯ ತಾಯಿ ಮನೆಗೆ ಮಗನ ಜತೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ವೈದ್ಯರನ್ನ ಭೇಟಿ ಮಾಡಲು ಹೋಗುತ್ತಿದ್ದರು. ಈ ವೇಳೆ ಬಸ್ ನಿಲ್ದಾಣದ ತಿರುವಿನ ಬಳಿಯೇ ಇರುವ ನಂದಿನಿ ಹಾಲಿನ ಬೂತ್​ನ ಎದುರಿನಿಂದ ಮತ್ತೊಂದು ಕಡೆಗೆ ಮಗುವಿನ ಶಾಹಿದಾ ದಾಟಿದ್ದು, ಯಮದೂತನಂತೆ ಅತಿ ವೇಗವಾಗಿ ಬಸ್​ ನಿಲ್ದಾಣಕ್ಕೆ ಬಂದ ಬಸ್ ತಾಯಿ-ಮಗುವಿನ ತಲೆ ಮೇಲೆ ಹರಿದಿದೆ. ತಲೆ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net