

ಉಳ್ಳಾಲ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 35 ವರ್ಷದ ಮಹಿಳೆಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ತಜ್ಞ ವೈದ್ಯರ ತಂಡ ವಿಶಿಷ್ಟ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದಾರೆ.
ಮಹಿಳೆಗೆ ಹೃದಯ ಸಂಬಂಧಿ ದೋಷದಿಂದಾಗಿ ಶುದ್ಧ ಮತ್ತು ಅಶುದ್ಧ ರಕ್ತ ಮಿಶ್ರಣವಾಗುತ್ತಿತ್ತು. ಈ ಸಮಸ್ಯೆಗೆ ಪ್ರಥಮ ಬಾರಿ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆದಿದೆ. ವಿಶೇಷ ಆಧುನಿಕ ಉಪಕರಣ ಬಳಸಿಕೊಂಡು ಡಾ.ಎ.ಜಿ.ಜಯಕೃಷ್ಣನ್, ಡಾ.ಎಂ.ಗೋಪಾಲಕೃಷ್ಣನ್, ಡಾ.ಮಂಜುನಾಥ ಕಾಮತ್, ಡಾ.ನರೇಶ್ ಹೆಗ್ಡೆ, ಡಾ.ಅನುಪ್ ಶ್ರೀನಿವಾಸನ್, ಪರ್ಫ್ಯೂಷನಿಸ್ಟ್‌ಗಳು ಹಾಗೂ ನರ್ಸ್‌ಗಳ ತಂಡ ಶಸ್ತ್ರ ಚಿಕಿತ್ಸೆ ಯಶಸ್ಸಿಗೆ ಸಹಕರಿಸಿದ್ದರು. ಶಸ್ತ್ರಚಿಕಿತ್ಸೆ ನಂತರ ರೋಗಿ ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ರೋಗಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಿರ್ವಹಿಸಲಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.