

ಬೆಳಗಾವಿ: ಕರಾವಳಿಗೆ ಸೀಮಿತವಾಗಿದ್ದ ಹಿಜಾಬ್ ವಿವಾದ ಇದೀಗ ಗಡಿ ಜಿಲ್ಲೆ ಬೆಳಗಾವಿಗೂ ವ್ಯಾಪಿಸಿದೆ.
ರಾಮದುರ್ಗ ತಾಲೂಕಿನ ಸರ್ಕಾರಿ ಪಿಯು ಕಾಲೇಜಿನ ಕೆಲ ವಿದ್ಯಾರ್ಥಿಗಳು ಗುರುವಾರ ಕೇಸರಿ ಶಾಲು ಧರಿಸಿ ತರಗತಿಗಳಿಗೆ ಹಾಜರಾಗಿದ್ದರು. ಕಾಲೇಜು ಆಡಳಿತ ಮಂಡಳಿಯು ಪೊಲೀಸರನ್ನು ಕರೆಸಿ ವಿದ್ಯಾರ್ಥಿಗಳು ತೊಟ್ಟಿದ್ದ ಶಾಲು ತೆಗೆಸಲು ಯತ್ನಿಸಿದ್ದಾರೆ. ಶಾಲು ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳಿನ್ನು ತರಗತಿಯಿಂದಲೇ ಹೊರದಬ್ಬಲಾಗಿದೆ.
ಈ ಘಟನೆಯನ್ನು ಕಾಲೇಜು ಆಡಳಿತ ಮಂಡಳಿ ಮುಚ್ಚಿಹಾಕಿತ್ತು. ಆದರೆ, ಮೊಬೈಲ್ನಲ್ಲಿ ಈ ಘಟನೆಯ ಫೋಟೋ ತೆಗೆದಿದ್ದ ಇತರ ವಿದ್ಯಾರ್ಥಿಗಳು ವೈರಲ್ ಮಾಡಿದ್ದರಿಂದ ಶುಕ್ರವಾರ ಈ ವಿದ್ಯಮಾನ ಬೆಳಕಿಗೆ ಬಂದಿದೆ.