ರಾಜ್ಯಸಭೆ ಚುನಾವಣೆ: ನಿರ್ಮಲಾಗೆ ಗೆಲುವು, ಕಾಂಗ್ರೆಸ್ ಮನವೊಲಿಕೆ ವಿಫಲ

rajyasabhe election
Published on

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ವಿಧಾನಸೌಧದಲ್ಲಿ ಮತದಾನ ಆರಂಭವಾಗಿದ್ದು, ಮೊದಲ ಅರ್ಧಗಂಟೆಯಲ್ಲಿ ಬಿಜೆಪಿಯಿಂದ 52 ಶಾಸಕರು ಮತದಾನ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್​ಗೆ ಅಗತ್ಯವಾದ 46 ಮೊದಲ ಪ್ರಾಶಸ್ತ್ಯ ಮತ ಸಿಕ್ಕಿದೆ. ಆ ಮೂಲಕ ರಾಜ್ಯಸಭೆಗೆ ಅವರ ಆಯ್ಕೆ ಖಚಿತವಾಗಿದೆ.

ಇದುವರೆಗೆ ಜೆಡಿಎಸ್‌ನ 6 ಶಾಸಕರು ಮತದಾನ ಮಾಡಿದ್ದಾರೆ. ಕಾಂಗ್ರೆಸ್‌ನ 17 ಶಾಸಕರು ಮತದಾನ ಮಾಡಿದ್ದಾರೆ.

ಕಾಂಗ್ರೆಸ್ ಮನವೊಲಿಕೆ ವಿಫಲ: ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದರೆ ಕ್ಷೇತ್ರದಲ್ಲಿ ಹಣ ಪಡೆದು ಮತದಾನ ಮಾಡಿದ್ದಾಗಿ ಅಪಪ್ರಚಾರ ಮಾಡುತ್ತಾರೆ. ನಾವೀಗ ನಿಮ್ಮ‌ ಜತೆ ನಿಲ್ಲಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಸಮಸ್ಯೆ ಆಗಬಹುದು. ನಮ್ಮ‌ ಪಾಡಿಗೆ ಬಿಡಿ ಎಂದು ಕೈ ನಾಯಕರಲ್ಲಿ ಜೆಡಿಎಸ್ ರೆಬಲ್ ಶಾಸಕರು ಮನವಿ ಮಾಡಿದ್ದು, ಕೊನೇ ಕ್ಷಣದಲ್ಲಿ ಕಾಂಗ್ರೆಸ್​ ಮನವೊಲಿಕೆ ವಿಫಲವಾಗ್ತಿದೆ.

Koo App
ಇಂದು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಯಲ್ಲಿ ನನ್ನ ಮತದಾನದ ಹಕ್ಕನ್ನು ಚಲಾಯಿಸಿದೆನು‌.
View attached media content
-Basavaraj Bommai (@bsbommai)10 June 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net