ಗುತ್ತಿಗೆದಾರನ​ ಸಾವಿಗೂ ಮುನ್ನ ಲಾಡ್ಜ್​ಗೆ ಬಂದಿದ್ದನೇ ರಾಜೇಶ್​? ಯಾರೀತ? ಈ ಕೇಸ್​ಗೆ ಮತ್ತೊಂದು ತಿರುವು

Santhosh Death Case
Published on

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಸಂತೋಷ್​ ಸಾವಿನ ಪ್ರಕರಣ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಸಚಿವ ಈಶ್ವರಪ್ಪ ರಾಜೀನಾಮೆ ಘೋಷಿಸಿದ್ದಾರೆ. ಅತ್ತ ಈಶ್ವರಪ್ಪರನ್ನ ಬಂಧಿಸುವವರೆಗೂ ಹೋರಾಟ ನಿಲ್ಲಿಸಲ್ಲ ಎಂದು ಕಾಂಗ್ರೆಸ್​ ಪಟ್ಟು ಹಿಡಿದಿದೆ. ಇದೀಗ ಈ ಪ್ರಕರಣದಲ್ಲಿ ರಾಜೇಶ್ ಎಂಬ ಹೊಸ ಹೆಸರು ತಳುಕು ಹಾಕಿಕೊಂಡಿದ್ದು, ಕುತೂಹಲ ಮೂಡಿಸಿದೆ. ‘

ಸಾವಿಗೂ ಮುನ್ನ ಉಡುಪಿಯ ಶಾಂಭವಿ ಲಾಡ್ಜ್​ನಲ್ಲಿ ತನ್ನಿಬ್ಬರು ಸ್ನೇಹಿತರಾದ ಸಂತೋಷ್ ಮೇದಪ್ಪ ಮತ್ತು ಪ್ರಶಾಂತ್ ಶೆಟ್ಟಿ ಜತೆ ತಂಗಿದ್ದ ಸಂತೋಷ್ ಪಾಟೀಲ್, ಸೋಮವಾರ ಸಂಜೆ ತನಗಾಗಿ ಪ್ರತ್ಯೇಕ ರೂಮ್ ಬುಕ್ ಮಾಡಿದ್ದರು. ನನ್ನನ್ನು ಭೇಟಿಯಾಗಲು ರಾಜೇಶ್ ಎಂಬಾತ ಬರುತ್ತಾನೆ. ನಾನು ಮತ್ತು ಅವನು ಒಂದೇ ಕೋಣೆಯಲ್ಲಿ ಇರುತ್ತೇವೆ. ನೀವಿಬ್ಬರೂ ಮತ್ತೊಂದು ರೂಮಿನಲ್ಲಿ ಉಳಿದುಕೊಂಡಿರಿ ಎಂದು ಹೇಳಿರುವುದಾಗಿ ಸ್ನೇಹಿತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿರುವ ಸಂತೋಷ್​ ಕೇಸ್​ ಬಗ್ಗೆ ಪೊಲೀಸರು ಮೂರು ತಂಡ ರಚಿಸಿ ತನಿಖೆ ಮಾಡುತ್ತಿದ್ದು, ಈ ರಾಜೇಶ್ ಯಾರು? ಎಂಬ ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net