

ಚಿಕ್ಕಮಗಳೂರು: ಹಳ್ಳದ ನೀರಲ್ಲಿ ಕಾರು ಕೊಚ್ಚಿಕೊಂಡು ಹೋಗಿ ವ್ಯಕ್ತಿಯೊಬ್ಬರು ದುರಂತ ಅಂತ್ಯಕಂಡ ಘಟನೆ ಎನ್.ಆರ್.ಪುರ ತಾಲೂಕಿನ ಸಾತ್ಕೊಳದಲ್ಲಿ ಸಂಭವಿಸಿದೆ.
ಅರಶಿನಗೆರೆಯ ಪ್ರಸನ್ನ(51) ಮೃತ ದುರ್ದೈವಿ. ಶ್ರಾವಣ ಮಾಸದ ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಪ್ರಸನ್ನ ಸೇರಿ ಮೂವರು ಕಾರಿನಲ್ಲಿ ತೆರಳುತ್ತಿದ್ದರು. ಧಾರಾಕಾರ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಮಾರ್ಗಮಧ್ಯೆ ಕಾರು ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ಪ್ರಸನ್ನ ಮೃತಪಟ್ಟಿದ್ದು, ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ಎನ್.ಆರ್.ಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.