ನ.16ರಂದು ಅರಮನೆ ಮೈದಾನದಲ್ಲಿ 'ಪುನೀತ್ ನುಡಿ ನಮನ' ಕಾರ್ಯಕ್ರಮ

Puneeth (1)
Published on

ಬೆಂಗಳೂರು: ಚಂದನವನದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ಗೌರವ ಸಲ್ಲಿಸಲು ಕನ್ನಡ ಚಿತ್ರರಂಗದಿಂದ ನವೆಂಬರ್ 16ರಂದು ಅರಮನೆ ಮೈದಾನದಲ್ಲಿ 'ಪುನೀತ್ ನುಡಿ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

'ಪುನೀತ್ ನುಡಿ ನಮನ' ಕಾರ್ಯಕ್ರಮದ ರೂಪುರೇಷೆ ಸಿದ್ಧವಾಗುತ್ತಿದ್ದು, ತಮಿಳು-ತೆಲುಗು ಚಿತ್ರರಂಗದವರನ್ನೂ ಕರೆಯಲು ನಿರ್ಧಸಿದ್ದೇವೆ. ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘದಿಂದ ಜಂಟಿಯಾಗಿ ಈ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಅನುಮತಿ ಸಿಕ್ಕಿದೆ ಎಂದು ಫಿಲಂ ಚೇಂಬರ್​ ಅಧ್ಯಕ್ಷ ಜೈರಾಜ್​ ತಿಳಿಸಿದ್ದಾರೆ.

ಪುನೀತ್​ ಬಾರದೂರಿಗೆ ಹೋಗಿ 5 ದಿನ ಕಳೆದರೂ ನಮ್ಮ ನೋವು ಮಾತ್ರ ಕಿಂಚಿತ್ತೂ ಕಡೆಮೆ ಆಗಿಲ್ಲ. ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 'ಪುನೀತ್​ ನುಡಿ ನಮನ' ಹಮ್ಮಿಕೊಳ್ಳಲಾಗಿದೆ.

ಅಂದು ಸಂಗೀತ ನಮನ ಇರಲಿದೆ. ಇದರ ಉಸ್ತುವಾರಿಯನ್ನ ಗುರುಕಿರಣ್​ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮ ಚಿತ್ರರಂಗದವರು ಪಾಲ್ಗೊಳ್ಳಲು ಸೀಮಿತವಾಗಿದೆ. ಡಾ. ರಾಜ್​ ಕುಟುಂಬಸ್ಥರು ಇರಲಿದ್ದಾರೆ. ಚಿತ್ರರಂಗದ ಎಲ್ಲ ಸಂಘಟನೆ, ಸಂಘ ಸಂಸ್ಥೆಗಳು ಪಾಲ್ಗೊಳ್ಳಬೇಕು. ಸಾರ್ವಜನಿಕರು ಮಾಧ್ಯಮಗಳಲ್ಲಿ ಕಾರ್ಯಕ್ರಮ ನೋಡಬೇಕು ಎಂದು ಸಾರಾ ಗೋವಿಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net