

ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸದ ನಿಮಿತ್ತ ಇಂದು(ಸೋಮವಾರ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಂಗಳೂರಿಗೆ ಆಗಮಿಸಿದರು. ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಮನಾಥ್ ಕೋವಿಂದ್ ಮತ್ತು ಸವಿತಾ ಕೋವಿಂದ್ ಅವರನ್ನು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾಗತಿಸಿದರು.
ಸೋಮವಾರ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತಮಹೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ನಾಳೆ(ಜೂ.14) ಬೆಂಗಳೂರು ಹೊರವಲಯದ ಕನಕಪುರ ರಸ್ತೆ ಸಮೀಪ ದೊಡ್ಡ ಕಲ್ಲಸಂದ್ರ ಬಳಿಯ ವೈಕುಂಠ ಬೆಟ್ಟದಲ್ಲಿ ತಿರುಪತಿ ತಿರುಮಲ ದೇವಾಲಯ ಹೋಲುವ ಇಸ್ಕಾನ್ ದೇಗುಲದ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.