ಕರೊನಾ ಟೆಸ್ಟ್​​ ಅಂತಾ ಚಿಕಿತ್ಸೆ ವಿಳಂಬ: ಆಸ್ಪತ್ರೆ ಬಾಗಿಲಲ್ಲೇ ಗರ್ಭಿಣಿ ಸಾವು! ಬೀದರ್​ನಲ್ಲೊಂದು ಮನಕಲಕುವ ಘಟನೆ

Death
Published on

ಬೀದರ್: ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಆಸ್ಪತ್ರೆಯ ಆವರಣದಲ್ಲೆ ಗರ್ಭಿಣಿಯೊಬ್ಬಳು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೃತಪಟ್ಟವಳನ್ನು ಹುಮ್ನಾಬಾದ್ ತಾಲೂಕಿನ ರೇಕುಲಗಿ ಗ್ರಾಮದ ಕಾವೇರಿ (22) ಎಂದು ಗುರುತಿಸಲಾಗಿದೆ.

ಭಾಲ್ಕಿ ಆಸ್ಪತ್ರೆಯಿಂದ ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ಬಂದ ಗರ್ಭಿಣಿ ಕಾವೇರಿ ಎನ್ನುವರನ್ನು ಆಸ್ಪತ್ರೆ ಸಿಬ್ಬಂದಿ ಕರೊನಾ ಟೆಸ್ಟ್​​ ಅಂತಾ ವಿಳಂಬ ಮಾಡಿ ಒಳಗಡೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡದಿದ್ದರಿಂದ ಗರ್ಭಿಣಿ ಮೃತಪಟ್ಟಿರುವುದಾಗಿ ಆಕೆಯ ಪೋಷಕರು ಆರೋಪಿಸಿದ್ದಾರೆ.

1 ಗಂಟೆಗಳ ಕಾಲ ಬ್ರಿಮ್ಸ್ ಆಸ್ಪತ್ರೆಯ ಆವರಣದಲ್ಲೆ ಚಿಕಿತ್ಸೆಗಾಗಿ ಪರದಾಡಿ ಗರ್ಭಿಣಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ. ಇದರಿಂದ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಜೊತೆಗೆ ಹಾಗೂ ಬ್ರಿಮ್ಸ್ ಸಿಬ್ಬಂದಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದರು.

ಗರ್ಭಿಣಿಯನ್ನು ಕರೆದುಕೊಂಡು ಬಂದ ವಾಹನದಿಂದ ಆಕೆಯನ್ನು ಸಿಬ್ಬಂದಿಗಳು ಆಸ್ಪತ್ರೆಯ ಒಳಗಡೆ ದಾಖಲಿಸಿಕೊಂಡಿಲ್ಲ. ಕನಿಷ್ಠ ಚಿಕಿತ್ಸೆ ನೀಡುವ ಕಾರ್ಯಕ್ಕೆ ಬ್ರಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಮುಂದಾಗದ ಕಾರಣ ಕಾರಿನಲ್ಲೇ ಗರ್ಭಿಣಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net